ಕಲಬುರಗಿ: ಗ್ರಾ.ಪಂ ಚುನಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರು ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿರುವ ಪ್ರಸಂಗ ಅಫಜಲಪುರ ತಾಲೂಕಿನ ಶ್ರೀ ಕ್ಷೇತ್ರ ದೇವಲ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ಗ್ರಾ.ಪಂ ಚುನಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಗೆಲುವು - Devalagapapur of Afzalpur Taluk of Kalaburagi District
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶ್ರೀ ಕ್ಷೇತ್ರ ದೇವಲ ಗಾಣಗಾಪುರ ಗ್ರಾಮದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ 4 ಮಂದಿ ವಿಜಯಶಾಲಿಯಾಗಿದ್ದಾರೆ.
ಗ್ರಾಪಂ ಚುನಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಗೆಲುವು
ಪಂಚಾಯಿತಿಯ ವಾರ್ಡ್ನಿಂದ ನಂ.1ರಿಂದ ಗುಂಡಪ್ಪ ಹೊಸ್ಮನಿ, ವಾರ್ಡ್ ನಂ.2ರಿಂದ ವಿಜಯಲಕ್ಷ್ಮಿ ನಾಗೇಶ ಹೊಸ್ಮನಿ, ವಾರ್ಡ್ ನಂ.3ರಿಂದ ಶಾಂತಪ್ಪ ಹೊಸ್ಮನಿ(ಸಾಮಾನ್ಯ ವರ್ಗ) ಮತ್ತು ವಾರ್ಡ್ ನಂ. 4ರಿಂದ ರೇಷ್ಮಾ ಮಂಜುನಾಥ ಹೊಸ್ಮನಿ ಆಯ್ಕೆಯಾಗಿದ್ದಾರೆ.
ಗುಂಡಪ್ಪ ಹೊಸ್ಮನಿ ಒಮ್ಮೆ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ದೇವಲ ಗಾಣಗಾಪುರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ ರಾಜ್ಯದಲ್ಲಿ ಮಾದರಿ ಗ್ರಾಮ ಮಾಡುವುದಾಗಿ ತಿಳಿಸಿದ್ದಾರೆ.