ಕಲಬುರಗಿ:ಹೊಲದಲ್ಲಿ ರೈತರು ರಾಶಿ ಮಾಡಿಟ್ಟಿದ್ದ ತೊಗರಿಯನ್ನು ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನರೋಣಾ ಪೊಲೀಸರು ಬಂಧಿಸಿದ್ದಾರೆ.
ಶ್ರೀಕಾಂತ್ ಗಾಯಕಾವಾಡ, ಗಣಪತಿ ಗಾಯಕಾವಾಡ, ಕಾಶಿನಾಥ್ ಗಾಯಕಾವಾಡ ಮತ್ತು ಶಂಕ್ರಪ್ಪ ಲೆಂಗಟಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 1.25 ಲಕ್ಷ ಮೌಲ್ಯದ 21 ಕ್ವಿಂಟಲ್ ತೊಗರಿ, ಕೃತ್ಯಕ್ಕೆ ಬಳಸಿದ 3 ಲಕ್ಷ ಮೌಲ್ಯದ ಪಿಕಪ್ ಬೊಲೆರೋ ವಾಹನ ಸೇರಿ ಒಟ್ಟು 4.25 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.