ಕಲಬುರಗಿ: ದೇಶದಲ್ಲಿ ಲೂಟ್ ಇಂಡಿಯಾ, ಸೆಲ್ ಸರ್ಕಾರ ನಡಿತಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವರು ದೇಶ ಕಂಡ ಜ್ಞಾನಿಯಿಲ್ಲದ ಮಂತ್ರಿ, ಉತ್ತಮ ಯೋಜನೆಗಳನ್ನ ಹಾಕಿಕೊಂಡು ಜನರಿಗೆ ಅನುಕೂಲಕರ ಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಿದೆ. ಆದರೆ, ಕೇಂದ್ರ ಹೆಚ್ಚೆಚ್ಚು ಟ್ಯಾಕ್ಸ್ ಕಲೆಕ್ಟ್ ಮಾಡಿ ಸಾರ್ವಜನಿಕರ ಜೇಬು ಖಾಲಿ ಮಾಡ್ತಿದೆ. ಈ ಮಧ್ಯೆ ಕೆಲ ಭಕ್ತರು ಪೆಟ್ರೋಲ್ ಬೆಲೆ ಎಷ್ಟೇ ಆಗಲಿ ನಾವು ಖರೀದಿ ಮಾಡ್ತೇವಿ ಅಂತಿದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿಕರಣ ವಿರುದ್ಧ ಹರಿಹಾಯ್ದ ಖಾದರ್ : ತಾಳಿ ಅಡವಿಟ್ಟು ಜೀವನ ನಡೆಸೋ ಪರಿಸ್ಥಿತಿ ಬಿಜೆಪಿ ಸರ್ಕಾರ ತಂದಿಟ್ಟಿದೆ. ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನ, ಸಂಸ್ಥೆಗಳನ್ನ ಖಾಸಗೀಕರಣ ಮಾಡಲಾಗಿದೆ. ಏರ್ಪೋರ್ಟ್ಗಳನ್ನೂ ಖಾಸಗಿಕರಣ ಮಾಡಿ ದೇಶದ ಸಂಪತ್ತು ಲೂಟಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಆರ್ಥಿಕ ನೀತಿಯಿಲ್ಲದ ಕಾರಣ ಯೋಜನೆಗಳ ಸಫಲವಾಗ್ತಿಲ್ಲ ಎಂದು ದೂರಿದರು.