ಕರ್ನಾಟಕ

karnataka

ETV Bharat / state

ಅಂಗನವಾಡಿ ಕಾರ್ಯಕರ್ತೆಯಿಂದ ಆಹಾರ ಪದಾರ್ಥ ಸಾಗಾಟ ಆರೋಪ; ಕ್ರಮಕ್ಕೆ ಆಗ್ರಹ

ಅಂಗನವಾಡಿಗೆ ನೀಡಿದ ಆಹಾರ ಪದಾರ್ಥ ಕಾರಿನ ಮೂಲಕ ಮನೆಗೆ ಸಾಗಿಸುವ ವೇಳೆ ಗ್ರಾಮಸ್ಥರು ಕಾರ್ಯಕರ್ತೆಯನ್ನು ಆಕ್ಷೇಪ ವ್ಯಕ್ತ ಪಡಿಸಿರುವ ಘಟನೆ ಚಿತ್ತಾಪುರ ತಾಲೂಕಿನ ರಾಂಪುರದಹಳ್ಳಿಯಲ್ಲಿ ನಡೆದಿದೆ.

fdf
ಅಂಗನವಾಡಿ ಕಾರ್ಯಕರ್ತೆಯಿಂದ ಆಹಾರ ಪದಾರ್ಥ ಸಾಗಾಟ ಆರೋಪ

By

Published : Jul 4, 2020, 10:54 PM IST

ಕಲಬುರಗಿ: ಅಂಗನವಾಡಿಗೆ ನೀಡಿದ ಆಹಾರ ಪದಾರ್ಥಗಳನ್ನು ಕಾರ್ಯಕರ್ತೆಯು ಕಾರಿನ ಮೂಲಕ ಮನೆಗೆ ಸಾಗಿಸುವ ವೇಳೆ ಗ್ರಾಮಸ್ಥರು ಆಕೆಯನ್ನು ತಡೆದು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಚಿತ್ತಾಪುರ ತಾಲೂಕಿನ ರಾಂಪುರದಹಳ್ಳಿಯಲ್ಲಿ ನಡೆದಿದೆ.

ಅಂಗನವಾಡಿ ಕಾರ್ಯಕರ್ತೆಯಿಂದ ಆಹಾರ ಪದಾರ್ಥ ಸಾಗಾಟ ಆರೋಪ
ಅಂಗನವಾಡಿ ಕಾರ್ಯಕರ್ತೆ ಜಗದೇವಿ ಎಂಬುವರು ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ, ಹೆಸರು, ಪೌಷ್ಟಿಕ ಆಹಾರದ ಪಾಕೆಟ್​ಗಳನ್ನು ಗಂಟು ಕಟ್ಟಿಕೊಂಡು ಕಾರಿನಲ್ಲಿ ಇಟ್ಟುಕೊಳ್ಳುವಾಗ ಗ್ರಾಮಸ್ಥರ ಹಿಡಿದು ತರಾಟೆ ತೆಗೆದುಕೊಂಡಿದ್ದಾರೆ. ಆಹಾರ ಪದಾರ್ಥ ತೆಗೆದುಕೊಂಡು ಹೋಗುವುದನ್ನು ಸಮರ್ಥಿಸಿಕೊಂಡ ಜಗದೇವಿ, ತನಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ ಹೀಗಾಗಿ ಅಂಗನವಾಡಿಯಲ್ಲಿ ಉಳಿದ ಸಾಮಾನುಗಳನ್ನ ಮನೆಗೆ ಒಯ್ಯುತ್ತಿದ್ದೇನೆ. ಇದರಲ್ಲಿ ತಪ್ಪೇನು? ಯಾರಿಗೆ ಬೇಕಾದ್ರೂ ಹೇಳ್ರಿ ಎಂದು ಅವಾಜ್ ಹಾಕಿದ್ದಾಳೆ. ಮಕ್ಕಳಿಗೆ ಕೊಡಬೇಕಾದ ಪೌಷ್ಟಿಕ ಆಹಾರ ಮನೆಗೆ ಒಯ್ದ ಕಾರ್ಯಕರ್ತೆ ಮೇಲೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details