ಕಲಬುರಗಿ:ನಾಳೆಯಿಂದ ಕಲಬುರಗಿ ಟು ದೆಹಲಿ ವಿಮಾನ ಹಾರಾಟ ಪ್ರಾರಂಭಗೊಳ್ಳಲಿದೆ. ಸ್ಟಾರ್ ಏರ್ ಸಂಸ್ಥೆ ದೆಹಲಿಗೆ ವಿಮಾನ ಹಾರಾಟ ಮಾಡುವ ಮೂಲಕ ರೈಲಿನ ಎರಡು ದಿನದ ಪ್ರಯಾಣ ಇದೀಗ ಕೇವಲ ಎರಡು ಗಂಟೆಯಲ್ಲಿ ತಲಪುವಂತೆ ಮಾಡಿದೆ.
ನಾಳೆಯಿಂದ ಕಲಬುರಗಿ ಟು ದೆಹಲಿ ವಿಮಾನ ಹಾರಾಟ ಪ್ರಾರಂಭ - ರಾಜ್ಯ ರಾಜಧಾನಿ ಬೆಂಗಳೂರಿಗೆ ವಿಮಾನ ಹಾರಾಟ ಆರಂಭಿಸಿರುವ ಸ್ಟಾರ್ಏರ್ ಸಂಸ್ಥೆ
ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿಗೆ ವಿಮಾನ ಹಾರಾಟ ಆರಂಭಿಸಿರುವ ಸ್ಟಾರ್ ಏರ್ ಸಂಸ್ಥೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ದೆಹಲಿಗೆ ವಿಮಾನ ಹಾರಾಟಕ್ಕೆ ಸನ್ನದ್ಧವಾಗಿದೆ.
ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿಗೆ ವಿಮಾನ ಹಾರಾಟ ಆರಂಭಿಸಿರುವ ಸ್ಟಾರ್ ಏರ್ ಸಂಸ್ಥೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ದೆಹಲಿಗೆ ವಿಮಾನ ಹಾರಾಟಕ್ಕೆ ಸನ್ನದ್ಧವಾಗಿದೆ. ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ ಮೂರು ದಿನಗಳ ಕಾಲ ವಿಮಾನ ಹಾರಾಟ ಮಾಡಲಿದೆ.
ಕಲಬುರಗಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 10-30ಕ್ಕೆ ಹೊರಟು ಮಧ್ಯಾಹ್ನ 12-40ಕ್ಕೆ ದೆಹಲಿ ತಲುಪಲಿದೆ. ದೆಹಲಿಯಿಂದ 1-10ಕ್ಕೆ ಹೊರಟು 3-30ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಕಲಬುರಗಿಯಿಂದ ಸುಮಾರು 1,800 ಕಿಲೋ ಮೀಟರ್ ಅಂತರದಲ್ಲಿರುವ ದೆಹಲಿಗೆ ರೈಲು ಮೂಲಕ ತೆರಳಿದರೆ ಎರಡು ದಿನ ಪ್ರಯಾಣ ಮಾಡಬೇಕಿತ್ತು. ಇದೀಗ ವಿಮಾನ ಹಾರಾಟದಿಂದ ಉದ್ಯಮಿ, ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.
TAGGED:
ಸ್ಟಾರ್ಏರ್ ಸಂಸ್ಥೆ