ಕಲಬುರಗಿ: ಇಂದಿನಿಂದ ದೇಶದಾದ್ಯಂತ ವಿಮಾನ ಹಾರಾಟ ಆರಂಭವಾಗಿದ್ದು, ಕಲಬುರಗಿ ಏರ್ಪೋರ್ಟ್ನಿಂದಲೂ ಬೆಂಗಳೂರಿನತ್ತ ವಿಮಾನಗಳು ಟೇಕಾಫ್ ಆಗುತ್ತಿವೆ.
ಕಲಬುರಗಿ ಏರ್ಪೋರ್ಟ್ನಿಂದಲೂ ಬೆಂಗಳೂರಿನತ್ತ ಹಾರಿದ ವಿಮಾನಗಳು - The corona virus
ದೇಶದಾದ್ಯಂತ ವಿಮಾನ ಹಾರಾಟ ಆರಂಭವಾಗಿದ್ದು, ಕಲಬುರಗಿ ಏರ್ಪೋರ್ಟ್ನಿಂದಲೂ ಬೆಂಗಳೂರಿನತ್ತ ವಿಮಾನಗಳು ಟೇಕಾಫ್ ಆಗುತ್ತಿವೆ. ರಾಜ್ಯದೊಳಗೆ ಮಾತ್ರ ಪ್ರಯಾಣ ಇರೋದ್ರಿಂದ ರಾಜಧಾನಿ ಬೆಂಗಳೂರಿನಿಂದ ಬಂದ ಪ್ರಯಾಣಿಕರಿಗೆ ಯಾವುದೇ ತರಹದ ಕ್ವಾರಂಟೈನ್ ಮಾಡಿಲ್ಲ. ಆರೋಗ್ಯ ತಪಾಸಣೆ ಮಾಡಿ ಅವರವರ ಮನೆಗೆ ತೆರಳಲು ಅನುಮತಿ ನೀಡಲಾಗಿದೆ.

ಕಲಬುರಗಿ ಏರ್ಪೋರ್ಟ್ ನಿಂದಲೂ ಬೆಂಗಳೂರಿನತ್ತ ಹಾರಿದ ವಿಮಾನಗಳು
ಕಲಬುರಗಿ ಏರ್ಪೋರ್ಟ್ನಿಂದಲೂ ಬೆಂಗಳೂರಿನತ್ತ ಹಾರಿದ ವಿಮಾನಗಳು
ಸ್ಟಾರ್ ಏರ್ ಸಂಸ್ಥೆಯ ವಿಮಾನ ಇಂದು ಬೆಳಗ್ಗೆ 8-30ಕ್ಕೆ ಬೆಂಗಳೂರಿನ ಕೆಐಎಎಲ್ ಏರ್ಪೋರ್ಟ್ನಿಂದ ಟೇಕಾಫ್ ಆಗಿ 9-30ಕ್ಕೆ ಕಲಬುರಗಿಯ ಸರಡಗಿ ಏರ್ಪೋರ್ಟ್ಗೆ ಬಂದಿಳಿದಿದೆ. ಬಳಿಕ ಇಲ್ಲಿಂದ 10.20ಕ್ಕೆ ಬೆಂಗಳೂರಿನತ್ತ ಪ್ರಯಾಣಿಕರನ್ನು ಹೊತ್ತು ತೆರಳಿದೆ. ಪ್ರತಿಯೊಬ್ಬ ಪ್ರಯಾಣಿಕರಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಮತ್ತು ಆರೋಗ್ಯ ತಪಾಸಣೆ ಮಾಡಿ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ.
ರಾಜ್ಯದೊಳಗೆ ಮಾತ್ರ ಪ್ರಯಾಣ ಇರೋದ್ರಿಂದ ರಾಜಧಾನಿ ಬೆಂಗಳೂರಿನಿಂದ ಬಂದ ಪ್ರಯಾಣಿಕರಿಗೆ ಯಾವುದೇ ತರಹದ ಕ್ವಾರಂಟೈನ್ ಮಾಡಿಲ್ಲ. ಆರೋಗ್ಯ ತಪಾಸಣೆ ಮಾಡಿ ಅವರವರ ಮನೆಗೆ ತೆರಳಲು ಅನುಮತಿ ನೀಡಲಾಗಿದೆ.