ಕರ್ನಾಟಕ

karnataka

ETV Bharat / state

ಮನೆ ಮುಂದೆ ಪುಡಾರಿಗಳ ದಾಂಧಲೆ: ಕಾರಿನ ಗಾಜು ಪುಡಿಪುಡಿ - five youths breaks down car glasses in kalaburagi

ಮನೆಯೊಂದರ ಮುಂದೆ ದಾಂಧಲೆ ಮಾಡಿ ಕಾರ್ ಗ್ಲಾಸ್ ಪುಡಿಪುಡಿ ಮಾಡಿರುವ ಘಟನೆ ಕಲಬುರಗಿಯ ಬ್ರದರ್ಸ್ ಬಡಾವಣೆಯಲ್ಲಿ ನಡೆದಿದೆ.

car
ಕಾರು ಗಾಜು ಪುಡಿಪುಡಿ

By

Published : Dec 6, 2019, 10:53 AM IST

ಕಲಬುರಗಿ:ಪುಡಾರಿಗಳು ಮನೆಯೊಂದರ ಮುಂದೆ ದಾಂಧಲೆ ಮಾಡಿ ಕಾರ್ ಗ್ಲಾಸ್ ಪುಡಿಪುಡಿ ಮಾಡಿರುವ ಘಟನೆ ಲಾಲಗೇರಿ ಕ್ರಾಸ್ ಜಂಗೆ ಬ್ರದರ್ಸ್ ಬಡಾವಣೆಯಲ್ಲಿ ನಡೆದಿದೆ.

ಮಧ್ಯರಾತ್ರಿ ಸಾಗರ ಗೋದೆ ಎಂಬಾತನ ಮೇಲೆ ಹಲ್ಲೆ ಮಾಡಲು ಐದಾರು ಯುವಕರ ಗುಂಪು ಸಾಗರ್​​​ ಎಂಬಾತನ ಮನೆಮುಂದೆ ಗಲಾಟೆ ಮಾಡಿದ್ದಾರೆ. ಸಾಗರ್​​​ ಮನೆಯಿಂದ ಹೊರಬಾರದ ಹಿನ್ನೆಲೆ ಆತನ ಕಾರ್​​ಗ್ಲಾಸ್ ಒಡೆದು ಪುಡಿ ಮಾಡಲಾಗಿದೆ.

ಕಾರು ಗಾಜು ಪುಡಿಪುಡಿ

ಕಲಬುರಗಿಯ ಕಾಲೇಜೊಂದರಲ್ಲಿ ಫಾರ್ಮಸಿ ಓದುತ್ತಿರುವ ಸಾಗರ್​​​ ಇತನ ಸ್ನೇಹಿತ ರಾಹುಲ್, ನಿರಂಜನ್ ಹಾಗೂ ಐದಾರು ಜನರಿದ್ದ ಗುಂಪು ಈ ಕೃತ್ಯ ನಡೆಸಿದೆ ಎಂದು ಸಾಗರ ಕುಟುಂಬದವರು ಆರೋಪಿಸಿದ್ದಾರೆ. ಸಾಗರ ಹಾಗೂ ಸ್ನೇಹಿತರ ಮಧ್ಯೆ ಕ್ಷುಲಕ ಕಾರಣಕ್ಕೆ ಜಗಳವಾಗಿತ್ತು. ಇದೆ ಹಗೆತನದಿಂದ ಮಧ್ಯರಾತ್ರಿ ಮನೆ ಎದುರು ಗಲಾಟೆ ಮಾಡಿದ್ದಾರೆಂದು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details