ಕಲಬುರಗಿ:ಒಂದೇ ಬಾರಿ ಐದು ಶಾಲಾ ಮಕ್ಕಳು ದಿಢೀರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ವಸತಿ ಶಾಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಒಂದೇ ಬಾರಿ ಐದು ಶಾಲಾ ಮಕ್ಕಳು ದಿಢೀರ್ ನಾಪತ್ತೆ! - Mudhola Residential School
ಒಂದೇ ಬಾರಿ ಐದು ಶಾಲಾ ಮಕ್ಕಳು ದಿಢೀರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ವಸತಿ ಶಾಲೆಯಲ್ಲಿ ನಡೆದಿದೆ.

ನಾಪತ್ತೆಯಾಗಿರುವ ಬಾಲಕರು
ಕೊತ್ತಪಲ್ಲಿ ಗ್ರಾಮದ ಅಂಕುಶ ಜಾಧವ್(14), ಜಿತೇಲಾ ರಾಥೋಡ್ (14), ಜೀತು ರಾಥೋಡ್ (16), ಅರ್ಜುನ್ ರಾಥೋಡ್ (14) ಹಾಗೂ ರವೀಂದ್ರ ರಾಥೋಡ್ (14) ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮುಧೋಳ ಪಿಐ ತಮ್ಮಾರಾಯ ಪಾಟೀಲ್, ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮಕ್ಕಳು ಶಾಲೆ ಬಿಟ್ಟು ಬೆಂಗಳೂರು ಮುಂಬೈನತ್ತ ಹೋಗುವ ಆಲೋಚನೆಯಲ್ಲಿದ್ದರು ಎನ್ನಲಾಗಿದೆ.
ಮಕ್ಕಳ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ 9480803594 ಸಂಖ್ಯೆಗೆ ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.