ಕರ್ನಾಟಕ

karnataka

ETV Bharat / state

ಮದುವೆಗೆ ಹುಡುಗಿ ತೋರಿಸುವುದಾಗಿ ನಂಬಿಸಿ ವ್ಯಕ್ತಿ ಕತ್ತರಿಸಿ ಬರ್ಬರ ಕೊಲೆ: ಐವರ ಬಂಧನ - ಕಲಬುರಗಿ ನಂಬಿಸಿ ಕೊಲೆ

ಮದುವೆಗೆ ಹುಡುಗಿ ತೋರಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆಗೈದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

five-arrested-in-person-murder-case
ಕೊಲೆ ಪ್ರಕರಣ

By

Published : Apr 3, 2021, 5:08 AM IST

ಕಲಬುರಗಿ:ಮದುವೆಗೆ ಹುಡುಗಿ ತೋರಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವನನ್ನು ಮಹಾರಾಷ್ಟ್ರದ ಅಕ್ಕಲಕೋಟ್‌ಗೆ ಕರೆದುಕೊಂಡು ಹೋಗಿ ದೇಹವನ್ನು ಎರಡು ಭಾಗವಾಗಿ ಕತ್ತರಿಸಿ ಬರ್ಬರ ಕೊಲೆಗೈದಿದ್ದಲ್ಲದೆ, ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಮಾಧನ ಹಿಪ್ಪರಗಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಿರೋಳ್ಳಿ ಗ್ರಾಮದ ನಿವಾಸಿಗಳಾದ ಮಲ್ಲಿನಾಥ್, ಬಸವರಾಜ, ಹಣಮಂತ ಬೆಳ್ಳಿಕಟ್ಟಿ, ಗಾಂಧರಬಾಯಿ ತೋರಣಗಿ ಹಾಗೂ ನಾಗಮ್ಮಾ ಬಂಧಿತ ಆರೋಪಿಗಳು. ಮಾ. 29ರಂದು ರಾತ್ರಿ ವೇಳೆ ನಾಗಪ್ಪ ವಾಡೇದ್ ಎಂಬಾತನ ಕೊಲೆ ನಡೆದಿತ್ತು.

ಕೊಲೆಯಾದ ವ್ಯಕ್ತಿಗೆ ಮದುವೆಗಾಗಿ ಹುಡುಗಿ ತೋರಿಸುವ ನೆಪವೊಡ್ಡಿ ಹಿರೋಳ್ಳಿ ಗ್ರಾಮದಿಂದ ಮಹಾರಾಷ್ಟ್ರದ ಅಕ್ಕಲಕೋಟ್‌ಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು, ಕುರುಪಿಯಿಂದ ಕೊಯ್ದು, ಕೊಡಲಿಯಿಂದ ದೇಹವನ್ನು ಎರಡು ಭಾಗವಾಗಿ ಕತ್ತರಿಸಲಾಗಿತ್ತು. ಬಳಿಕ ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಶವದ ತುಂಡುಗಳನ್ನು ಚೀಲಗಳಲ್ಲಿ ತುಂಬಿ ಹೊಲದ ಕೊಳವೆಬಾವಿಯಲ್ಲಿ ಬಿಸಾಡಿದ್ದಾಗಿ ಪೊಲೀಸರ ತನಿಖೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಹಳೇ ವೈಷ್ಯಮ್ಯದ ಹಿನ್ನೆಲೆ ಕೊಲೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.‌

ABOUT THE AUTHOR

...view details