ಕಲಬುರಗಿ: ಪ್ರಥಮ ಬಾರಿಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕಲಬುರಗಿಗೆ ಮೊದಲ ಮಹಿಳಾ ಎಸ್ಪಿ: ಅಧಿಕಾರ ಹಸ್ತಾಂತರಿಸಿದ ಯಡಾ ಮಾರ್ಟಿನ್ - 2015 ನೇ ಬ್ಯಾಚ್‌ನ ಡಾ. ಸಿಮಿ ಮರಿಯಂ ಜಾರ್ಜ್
ಡಾ. ಸಿಮಿ ಮರಿಯಂ ಜಾರ್ಜ್ ಅವರನ್ನು ಕಲಬುರಗಿ ನೂತನ ಎಸ್ಪಿಯಾಗಿ ನಿಯೋಜಿಸಿ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇಂದು ಈ ಹಿಂದೆ ಎಸ್ಪಿಯಾಗಿದ್ದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮರಿಯಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಹಸ್ತಾಂತರಿಸಿದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್
ನೂತನ ಎಸ್ಪಿಯಾಗಿ ಡಾ.ಸಿಮಿ ಮರಿಯಂ ಜಾರ್ಜ್ ಅವರು ಅಧಿಕಾರ ಸ್ವಿಕಾರ ಮಾಡಿದರು. ಈ ಹಿಂದೆ ಎಸ್ಪಿಯಾಗಿದ್ದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮರಿಯಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಬೆಂಗಳೂರು ಅಸಿಸ್ಟಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸಿದ, 2015 ನೇ ಬ್ಯಾಚ್‌ನ ಡಾ. ಸಿಮಿ ಮರಿಯಂ ಜಾರ್ಜ್ ಅವರನ್ನು ಕಲಬುರಗಿ ನೂತನ ಎಸ್ಪಿಯಾಗಿ ನಿಯೋಜಿಸಿ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇಂದು ಅಧಿಕಾರ ವಹಿಸಿಕೊಂಡರು. ಕಲಬುರಗಿ ಜಿಲ್ಲೆಯ ಮೊದಲ ಮಹಿಳಾ ಎಸ್ಪಿ ಎಂಬ ಹೆಗ್ಗಳಿಕೆಗೆ ಡಾ.ಸಿಮಾ ಪಾತ್ರರಾಗಿದ್ದಾರೆ.