ಕಲಬುರಗಿ:ಕೃಷಿ ಪರಿಕರಗಳ ಮಾರಾಟಗಾರರ ಮೊದಲನೇ ರಾಜ್ಯಮಟ್ಟದ ಸಮ್ಮೇಳನ ಕಲಬುರಗಿ ನಗರದಲ್ಲಿ ಇದೇ 14ರಂದು ನಡೆಯಲಿದೆ.
ಫೆ. 14 ರಂದು ಕೃಷಿ ಪರಿಕರಗಳ ಮಾರಾಟಗಾರರ ಮೊದಲನೇ ರಾಜ್ಯಮಟ್ಟದ ಸಮ್ಮೇಳನ - ಮಾರಾಟಗಾರ
ಕೃಷಿ ಪರಿಕರಗಳ ಮಾರಾಟಗಾರರ ಮೊದಲನೇ ರಾಜ್ಯಮಟ್ಟದ ಸಮ್ಮೇಳನ ಕಲಬುರಗಿ ನಗರದಲ್ಲಿ ಇದೇ 14ರಂದು ನಡೆಯಲಿದೆ.
ಕೃಷಿ
ನಗರದ ನೆಹರು ಗಂಜ್ ಆಹಾರ ಧಾನ್ಯ ಬೀಜ ವ್ಯಾಪಾರಿಗಳ ಸಭಾಭವನದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಆಲ್ ಇಂಡಿಯಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ನವದೆಹಲಿಯ ಮನಮೋಹನ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 5 ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಗುವುದು. ಸಮ್ಮೇಳನಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಾವಿರಕ್ಕೂ ಅಧಿಕ ವ್ಯಾಪಾರಿಗಳು ಭಾಗವಹಿಸಲಿದ್ದಾರೆ ಎಂದು ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಹೇಳಿದರು.