ಕರ್ನಾಟಕ

karnataka

ETV Bharat / state

ಕಲಬುರಗಿ ವೃದ್ಧನ ಸಾವಿಗೆ ಕೊರೊನಾ ಕಾರಣ... ಮಾರಕ ಸೋಂಕಿಗೆ ದೇಶದ ಮೊದಲ ವ್ಯಕ್ತಿ ಬಲಿ - first corona death

ಇತ್ತೀಚೆಗೆ ಶಂಕಿತ ಕೊರೊನಾ ಸೋಂಕಿನಿಂದ ಕಲಬುರಗಿಯಲ್ಲಿ ಸಾವಿಗೀಡಾಗಿದ್ದ ವೃದ್ಧನ ಸಾವಿಗೆ ಮಾರಕ ಸೋಂಕು ಕಾರಣ ಎಂಬುದು ದೃಢಪಟ್ಟಿದೆ. ಈ ವಿಷಯವನ್ನು ಆರೋಗ್ಯ ಇಲಾಖೆಯೇ ಖಚಿತಪಡಿಸಿದೆ.

first corona death
first corona death

By

Published : Mar 12, 2020, 10:38 PM IST

Updated : Mar 12, 2020, 10:57 PM IST

ಕಲಬುರಗಿ: ಇತ್ತೀಚೆಗೆ ಶಂಕಿತ ಕೊರೊನಾ ಸೋಂಕಿನಿಂದ ಕಲಬುರಗಿಯಲ್ಲಿ ಸಾವಿಗೀಡಾಗಿದ್ದ ವೃದ್ಧನ ಸಾವಿಗೆ ಮಾರಕ ಸೋಂಕು ಕಾರಣ ಎಂಬುದು ದೃಢಪಟ್ಟಿದೆ. ಈ ವಿಷಯವನ್ನು ಆರೋಗ್ಯ ಇಲಾಖೆಯೇ ಖಚಿತಪಡಿಸಿದೆ.

ಉಮ್ರಾ ಯಾತ್ರೆಗಾಗಿ ಜನವರಿ 26ರಂದು ತೆರಳಿದ್ದ ಕಲಬುರಗಿ ಮೂಲದ ವೃದ್ಧ ಮೆಕ್ಕಾಗೆ ತೆರಳಿದ್ದು, ಮಾರ್ಚ್​ 6ರಂದು ವಾಪಸ್ ಬಂದಿದ್ದರು. ಈ ವೇಳೆ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದ ಕಾರಣ, ಕೊರೊನಾ ಶಂಕೆ ಮೇರೆಗೆ ಹೈದರಾಬಾದ್​ಗೆ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದರು.

ಕೊರೊನಾ ಸೋಂಕಿನ ಕುರಿತು ಅಧಿಕೃತ ವರದಿ ಪ್ರಕಟವಾಗದ ಹಿನ್ನೆಲೆಯಲ್ಲಿ ಇನ್ನೂ ದೃಢಪಟ್ಟಿರಲಿಲ್ಲ. ಆದರೆ, ಗಂಟಲಿನ ದ್ರವವನ್ನು ತೆಗೆದು ಕಳುಹಿಸಲಾಗಿದ್ದ ಮಾದರಿಯನ್ನು ಪರಿಶೀಲಿಸಿರುವ ವೈದ್ಯರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿರುವುದಾಗಿ ದೃಢಪಟಿಸಿದ್ದರು.

Last Updated : Mar 12, 2020, 10:57 PM IST

For All Latest Updates

ABOUT THE AUTHOR

...view details