ಕಲಬುರಗಿ:ಹೊಲದ ಬದುವಿಗೆ ಹಚ್ಚಿದ ಬೆಂಕಿ ಕಿಡಿಯಿಂದ ಗುಡಿಸಲಿಗೆ ಬೆಂಕಿ ವ್ಯಾಪಿಸಿದ ಪರಿಣಾಮ ಹಸುವೊಂದು ಸಜೀವ ದಹನಗೊಂಡ ದಾರುಣ ಘಟನೆ ಶಹಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವಾನಂದ ಮರತೂರ ಅವರಿಗೆ ಸೇರಿದ ಹಸು ಸಜೀವ ದಹನವಾಗಿದೆ. ಇನ್ನೊಂದು ಹಸುವಿನ ದೇಹ ಕೂಡಾ ಬಹುತೇಕ ಸುಟ್ಟಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಕೊಟ್ಟಿಗೆಯಲ್ಲಿ ಆಕಳು, ಎತ್ತು ಮತ್ತು ಕರುವನ್ನ ಕಟ್ಟಲಾಗಿತ್ತು. ಬೆಂಕಿ ತಗುಲಿದ ಪರಿಣಾಮ ಆಕಳಿಗೆ ಬೆಂಕಿ ಆವರಿಸಿದೆ. ಇನ್ನೂ ಬೆಂಕಿ ತಗುಲಿದ್ದರೂ, ಜೀವ ರಕ್ಷಣೆಗಾಗಿ ಬೆಂಕಿಯಿಂದ ಹಸು ಹೊರ ಬಂದಿದ್ದು, ತೀವ್ರ ಸುಟ್ಟ ಗಾಯಗಳಿಂದ ನರಳಿ ಸಾವನ್ನಪ್ಪಿದೆ.