ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್​​ನಲ್ಲಿ ಕೊಂಡೊಯ್ಯುತ್ತಿದ್ದ ಮೇವಿಗೆ ಬೆಂಕಿ: ತಪ್ಪಿದ ಭಾರಿ ಅನಾಹುತ - ಸೇಡಂ

ಟ್ರ್ಯಾಕ್ಟರ್​​ನಲ್ಲಿ ಕೊಂಡೊಯ್ಯುತ್ತಿದ್ದ ಮೇವಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

sedam
ಟ್ರ್ಯಾಕ್ಟರ್​​ನಲ್ಲಿ ಕೊಂಡೊಯ್ಯುತ್ತಿದ್ದ ಮೇವಿಗೆ ಬೆಂಕಿ

By

Published : Apr 1, 2021, 6:38 AM IST

ಸೇಡಂ:ಟ್ರ್ಯಾಕ್ಟರ್​​ನಲ್ಲಿ ಕೊಂಡೊಯ್ಯುತ್ತಿದ್ದ ಮೇವಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಬಿಬ್ಬಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಟ್ರ್ಯಾಕ್ಟರ್​​ನಲ್ಲಿ ಕೊಂಡೊಯ್ಯುತ್ತಿದ್ದ ಮೇವಿಗೆ ಬೆಂಕಿ

ಮೇವಿಗೆ ವಿದ್ಯುತ್ ತಂತಿ ತಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚಾಲಕ ಟ್ರಾಲಿಯಿಂದ ಎಂಜಿನ್ ಬೇರ್ಪಡಿಸಿದ್ದಾನೆ. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ‌. ಇಲ್ಲವಾದಲ್ಲಿ ಚಾಲಕನ ಜೀವಕ್ಕೂ ಅಪಾಯ ಹಾಗೂ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸುವ ಸಾಧ್ಯತೆ ಹೆಚ್ಚಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಮೇವು ಕಣಕಿ ಗ್ರಾಮದ ಬೀರಪ್ಪ ಮಾರ್ತಾಂಡಪ್ಪ ಪೂಜಾರಿ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ.

ABOUT THE AUTHOR

...view details