ಕಲಬುರಗಿ: ಆರ್‌ಟಿಐ ಕಾರ್ಯಕರ್ತ ಎನ್ನಲಾದ ಸಿದ್ರಾಮಯ್ಯ ಹಿರೇಮಠ ಸೇರಿ ಇಬ್ಬರ ವಿರುದ್ದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೋವಿಡ್ ಕರ್ತವ್ಯಕ್ಕೆ ಅಡ್ಡಿ ಆರೋಪ: ಕಲಬುರಗಿಯಲ್ಲಿ ವ್ಯಕ್ತಿ ವಿರುದ್ಧ ಎಫ್ಐಆರ್ - ಕಲಬುರಗಿ ಪೊಲೀಸ್ ಠಾಣೆ
ಕಲಬುರಗಿ ಆರ್‌ಟಿಐ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಸೇರಿ ಮತ್ತೊಬ್ಬನ ಮೇಲೆ ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ರಮೇಶ್ ಸಂಗಾ ದೂರು ನೀಡಿದ್ದಾರೆ.
ಕೋವಿಡ್-19 ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ, ಹಣಕ್ಕಾಗಿ ಬೇಡಿಕೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಸಿಎಂ ಇಲಾಖೆ ಅಧಿಕಾರಿ ರಮೇಶ್ ಸಂಗಾ ದೂರು ನೀಡಿದ್ದಾರೆ. ಜುಲೈ 17 ರಂದು ಸಿದ್ರಾಮಯ್ಯ ಹಿರೇಮಠ ಹಾಗೂ ಆಂದೋಲಾ ಮಲ್ಲಿಕಾರ್ಜುನ್ ತಮ್ಮ ಸಹಚರರೊಂದಿಗೆ ಕೆಲ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಅರ್ಜಿಗಳನ್ನು ತಂದು ತಕ್ಷಣ ಉತ್ತರಿಸುವಂತೆ ಒತ್ತಡ ಹೇರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಿಲ್ಲಾ ಬಿಸಿಎಂ ಕಚೇರಿಗೆ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 353, 384, 504, 506 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.