ಕಲಬುರಗಿ: ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ. ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಮಾಸ್ಕ್ ಹಾಕದೆ ಗುಟ್ಕಾ ಜಗಿಯುತ್ತಾ ಕಾರ್ನಲ್ಲಿ ಬಂದ ಅಧಿಕಾರಿಗೂ ಮುಲಾಜಿಲ್ಲದೆ ಪೊಲೀಸರು ದಂಡ ವಿಧಿಸಿದ್ದಾರೆ.
ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿ ಬಸವರಾಜ್ ಎಂಬುವವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಇನ್ಸ್ಪೆಕ್ಟರ್ ಬಸವರಾಜ್ ಪೊಲೀಸ್ ತಪಾಸಣೆ ವೇಳೆ ನಾನು ಇನ್ಸ್ಪೆಕ್ಟರ್ ಎಂದು ಹೇಳಿ ಬಚಾವ್ ಆಗಲು ಯತ್ನಿಸಿ, ಪೊಲೀಸರ ಜೊತೆ ವಾಗ್ವಾದ ಕೂಡ ನಡೆಸಿದರು. ಬೆಳಗ್ಗೆಯಿಂದ ಕೆಲಸದಲ್ಲಿ ಬ್ಯುಸಿ ಇದ್ದೇನೆ, ಆನ್ ಡ್ಯೂಟಿ ಇದ್ದೇನೆ ಎಂದು ವಾದ ಮಾಡಿದರು.