ಕರ್ನಾಟಕ

karnataka

ETV Bharat / state

ಹೋಳಿ ಆಚರಣೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ... ಓರ್ವನ ಸ್ಥಿತಿ ಗಂಭೀರ - kannada newspaper

ಹೋಳಿ ಆಡುತ್ತಿದ್ದ ಯುವಕರ ಗುಂಪೊಂದು ಒತ್ತಾಯಪೂರ್ವಕವಾಗಿ ರಂಗು ಹಾಕಲು ಮುಂದಾದಾಗ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕೋಮುಗಳ ಮಧ್ಯೆ ಕಲಹ

By

Published : Mar 21, 2019, 10:11 PM IST

ಕಲಬುರಗಿ:ಹೋಳಿ ರಂಗು ಮೈ ಮೇಲೆ ಹಾಕುವ ವಿಷಯವಾಗಿ ಎರಡು ಕೋಮುಗಳ ಮಧ್ಯೆ ಕಲಹ ಉಂಟಾದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಗಾಲಿಬ್ ಕಾಲೋನಿ ಮಹಮ್ಮದಿ ಚೌಕ್​ನಲ್ಲಿ ನಡೆದಿದೆ.

ಘಟನೆಯಲ್ಲಿ ಗಾಲಿಬ್ ಕಾಲೋನಿ ನಿವಾಸಿ ಮಹಮ್ಮದ್ ಆರೀಫ್ ಎಂಬಾತನ ತಲೆಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿದೆ. ಇನ್ನೋರ್ವ ಮಹಮ್ಮದ್​ ಯಾಶಿನ್ ಎಂಬಾತನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೋಳಿ ಆಡುತ್ತಿದ್ದ ಯುವಕರ ಗುಂಪೊಂದು ಒತ್ತಾಯಪೂರ್ವಕವಾಗಿ ಆರೀಫ್​ ಮೇಲೆ ರಂಗು ಹಾಕಲು ಮುಂದಾದಾಗ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಬಳಿಕ ಸುಮಾರು 15 ಜನರ ಯುವಕರ ಗುಂಪೊಂದು ಗಾಲಿಬ್ ಕಾಲೋನಿಗೆ ನುಗ್ಗಿ ಆರೀಫ್ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ ಮಾಡುವಾಗ ಆರೀಫ್ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೋಮುಗಳ ಮಧ್ಯೆಕಲಹ

ಈ ವೇಳೆ ಎದುರಾಳಿ ಗುಂಪಿನ ಯುವಕರು ಒಂದು ಬೈಕ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಯುವಕರ ತಂಡ ಬಿಟ್ಟು ಹೋಗಿದ್ದ ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಸ್ಥಿತಿ ಹತೋಟಿಗೆ ತಂದಿದ್ದಾರೆ.

ಇನ್ನು ಘಟನೆ ಬಗ್ಗೆ ತಿಳಿದ ಎಸ್​ಪಿ ಯಡಾ ಮಾರ್ಟಿನ್ ಅವರು ನ್ಯೂ ರಾಘವೇಂದ್ರ ಕಾಲೋನಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಎಸ್​ಪಿ ಮಾರ್ಟಿನ್, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಲೇ ವಿಶೇಷ ತಂಡ ರಚಿಸಲಾಗಿದ್ದು ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದರು. ಸದ್ಯ ಈ ಕುರಿತು ನ್ಯೂ ರಾಘವೇಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ABOUT THE AUTHOR

...view details