ಕರ್ನಾಟಕ

karnataka

ETV Bharat / state

ರೌಡಿ ಲಕ್ಷ್ಮಣನ ಕೊಲೆ ರಿವೇಂಜ್​ಗಾಗಿ ಜೈಲಿನಲ್ಲಿ ಫೈಟ್​​​​​: ಪ್ರಮುಖ ಆರೋಪಿಗಳ ಸ್ಥಳಾಂತರ - Fighting

ರೌಡಿ ಲಕ್ಷ್ಮಣನ ಕೊಲೆಗೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಫೈಟಿಂಗ್ ನಡೆದಿದೆ. ಹಾಗಾಗಿ ಜೈಲಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಸಂಗ್ರಹ ಚಿತ್ರ

By

Published : Apr 30, 2019, 10:36 AM IST

ಬೆಂಗಳೂರು: ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್​ಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಫೈಟಿಂಗ್ ನಡೆದಿದೆ. ರೌಡಿ ಲಕ್ಷ್ಮಣ್​ ಶಿಷ್ಯಂದಿರು ಕಿರಿಕ್ ಮಾಡಿದ್ದಲ್ಲದೇ ಕೊಲೆಯಲ್ಲಿ ಭಾಗಿಯಾದ ಹೇಮಂತ್​ ಅಲಿಯಾಸ್ ಹೇಮಿ ಜೊತೆ ಜೈಲಿನಲ್ಲೇ ಗಲಾಟೆ ಮಾಡಿ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಗಲಾಟೆ ಶುರುವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜೈಲು ಅಧಿಕಾರಿಗಳು ಭದ್ರತಾ ಕೊರತೆ ಹಿನ್ನೆಲೆ ಪ್ರಮುಖ ಐದು ಆರೋಪಿಗಳನ್ನ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.ಆರೋಪಿ ಹೇಮಂತ್ ಅಲಿಯಾಸ್ ಹೇಮಿಯನ್ನು ವಿಜಯಪುರ ಕಾರಾಗೃಹಕ್ಕೆ ಶಿಫ್ಟ್​ ಮಾಡಿದರೆ, ವರ್ಷಿಣಿ ಮತ್ತು ರೂಪೇಶ್​ ಅವರನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.

ಇನ್ನು ಕ್ಯಾಟ್​ ರಾಜನನ್ನು ಹಿಂಡಲಗಾ ಜೈಲಿಗೆ, ದೇವರಾಜ್​ನನ್ನು ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡಿ ಉಳಿದ ನಾಲ್ವರು ಆರೋಪಿಗಳಿಗೆ ಅದೇ ಜೈಲಿನಲ್ಲಿ ಟೈಟ್ ಸೆಕ್ಯೂರಿಟಿ ನೀಡಿ ಪ್ರತ್ಯೇಕ ಸೆಲ್​​ನಲ್ಲಿ ಇರಿಸಲಾಗಿದೆ.ಲಕ್ಷ್ಮಣ ಕೊಲೆಗೆ ಸೇಡು ತೀರಿಸಿಕೊಳ್ಳಲು ಜೈಲಿನಲ್ಲೇ ಸ್ಕೆಚ್​ ಹಾಕಲಾಗಿದೆ ಎಂಬ ಗುಮಾನಿ ಹಿನ್ನೆಲೆ ಕಾರಾಗೃಹ ಇಲಾಖಾ ಅಧಿಕಾರಿಗಳು ಟೈಟ್ ಸೆಕ್ಯುರಿಟಿ ಇಟ್ಟಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ABOUT THE AUTHOR

...view details