ಕಲಬುರಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಭೀಮಾ ನದಿ ತೀರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ
ಅಫ್ಜಲ್ಪುರ ತಾಲೂಕಿನ ಘತ್ತರಗಾ, ಗಾಣಗಾಪುರ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಗಾಣಗಾಪುರ ಬಳಿಯ ಸಂಗಮ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳು ನೀರಿನಿಂದ ಆವರಿಸಿಕೊಂಡಿದ್ದು, ಮೀನುಗಾರರ ಗುಡಿಸಲುಗಳು ಕೂಡ ಜಲಾವೃತಗೊಂಡಿವೆ.
ಉಜನಿ ಮತ್ತು ವೀರಾ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡಲಾಗುತ್ತಿದ್ದು, ಭೀಮಾ ನದಿಗೆ 2.80 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಹರಿದು ಬರುತ್ತಿದೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಅಫ್ಜಲ್ಪುರ ತಾಲೂಕಿನ ಘತ್ತರಗಾ, ಗಾಣಗಾಪುರ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಗಾಣಗಾಪುರ ಬಳಿಯ ಸಂಗಮ ಕ್ಷೇತ್ರದಲ್ಲಿ ಹಲವು ದೇವಸ್ಥಾನಗಳು ನೀರಿನಿಂದ ಆವರಿಸಿಕೊಂಡಿದ್ದು, ಮೀನುಗಾರರ ಗುಡಿಸಲುಗಳು ಕೂಡ ಜಲಾವೃತಗೊಂಡಿವೆ.
ಸಂಗಮ, ಘತ್ತರಗಾ ಸೇರಿ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮತ್ತಷ್ಟು ನೀರು ಹೆಚ್ಚಳವಾಗೋ ಸಾಧ್ಯತೆಯಿದ್ದು, ಭೀಮಾ ನದಿ ಅಕ್ಕ-ಪಕ್ಕದ ಊರುಗಳ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಇದೇ ರೀತಿಯ ಪ್ರವಾಹ ಪರಿಸ್ಥಿತಿ ಮುಂದುವರೆದಲ್ಲಿ ಜನಜೀವನ ಇನಷ್ಟು ಹದಗೆಡಲಿದೆ.