ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ 45 ಡಿಗ್ರಿ ಸೆಲ್ಸಿಯಸ್​​ ತಾಪಮಾನ: ಕೊರೊನಾಗೆ ಹೆದರಿ ಹೊರಗೆ ತಂಪು ಪಾನೀಯ ಮುಟ್ಟದ ಜನ! - cold drinks

ಕಲಬುರಗಿಯಲ್ಲಿ ಬಿಸಿಲಿನ ತಾಪ ವಿಪರೀತವಾಗಿದೆ. ಇಷ್ಟು ಬಿಸಿಲಿನಲ್ಲೂ ಜನರು ಹೊರಗಿನ ತಂಪು ಪಾನೀಯಗಳ ಮೊರೆ ಹೋಗುತ್ತಿಲ್ಲ. ಕೊರೊನಾ ವೈರಸ್ ಭಯಕ್ಕೆ ಮನೆಯಿಂದಲೇ ನೀರಿನ ಬಾಟಲ್ ತುಂಬಿಕೊಂಡು ಬರುತ್ತಿದ್ದಾರೆ. ಆದರೆ ಸ್ವಲ್ಪ ಸಮಯದಲ್ಲೇ ನೀರು ಬೆಚ್ಚಗಾಗಿ ಕುಡಿಯಲು ಆಗುತ್ತಿಲ್ಲ.

45 ಡಿಗ್ರಿ ಬಿಸಿಲು
45 ಡಿಗ್ರಿ ಬಿಸಿಲು

By

Published : May 28, 2020, 1:14 PM IST

ಕಲಬುರಗಿ:ನಗರದಲ್ಲಿ ಬೇಸಿಗೆಯ ತಾಪಕ್ಕೆ ತತ್ತರಿಸಿರುವ ಜನ ಕೊರೊನಾ ಭೀತಿಯಿಂದಾಗಿ ಹೊರಗಿನ ತಂಪು ಪಾನೀಯಗಳನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.

ಕಲಬುರಗಿಯಲ್ಲಿ ಬಿಸಿಲಿನ ತಾಪ ವಿಪರೀತವಾಗಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಭಾರೀ ಬಿಸಿಲು ದಾಖಲಾಗುತ್ತಿದೆ. ಬಿಸಿಲಿನ ಬೇಗೆಯಿಂದಾಗಿ ಜನಜಂಗುಳಿಯಿಂದ ತುಂಬಿರುತ್ತಿದ್ದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ಮಾರ್ಚ್​ನಿಂದ ಏಪ್ರಿಲ್​ವರೆಗೆ ಗರಿಷ್ಠ 41ರಿಂದ 42 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಿದ್ದರೆ, ಈ ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ.

ಕಲಬುರಗಿಯಲ್ಲಿ ವಿಪರೀತ ಬಿಸಿಲು

ಇಷ್ಟು ಬಿಸಿಲಿನಲ್ಲೂ ಜನರು ಹೊರಗಿನ ತಂಪು ಪಾನೀಯಗಳ ಮೊರೆ ಹೋಗುತ್ತಿಲ್ಲ. ಕೊರೊನಾ ವೈರಸ್ ಭಯಕ್ಕೆ ಮನೆಯಿಂದಲೇ ನೀರಿನ ಬಾಟಲ್ ತುಂಬಿಕೊಂಡು ಬರುತ್ತಿದ್ದಾರೆ. ಇನ್ನೂ ಕೆಲವರು ಬಿಸಿಲಿನ ಹೊಡೆತ ತಾಳಲಾರದೇ ತಂಪು ಪಾನೀಯ ಹುಡುಕಿ ಹೋದರೂ ಅಲ್ಲೊಂದು ಇಲ್ಲೊಂಡು ಅಂಗಡಿ ಬಿಟ್ಟರೆ ಎಲ್ಲೂ ಅಂಗಡಿಗಳು ತೆರೆದಿಲ್ಲ. ಒಂದು ಕಡೆ ಕೊರೊನಾ ಭೀತಿ, ಇನ್ನೊಂದೆಡೆ ಬಿಸಿಲಿನ ತಾಪ ಜಿಲ್ಲೆಯ ಜನರ ಪ್ರಾಣ ಹಿಂಡುತ್ತಿದೆ.

ABOUT THE AUTHOR

...view details