ಕಲಬುರಗಿ: ಇಬ್ಬರು ಪುಟ್ಟ ಕಂದಮ್ಮಗಳಿಗೆ ಸ್ವಂತ ತಂದೆಯೇ ವಿಷ ಕುಡಿಸಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಸ್ವಂತ ಮಕ್ಕಳಿಗೆ ವಿಷ ಕುಡಿಸಿದ ಕಟುಕ ಅಪ್ಪ: ಚಿಂಚೋಳಿಯಲ್ಲಿ ದುರಂತ! - ಕಲಬುರಗಿ ಕ್ರೈಂ ನ್ಯೂಸ್
ಇಬ್ಬರು ಪುಟ್ಟ ಕಂದಮ್ಮಗಳಿಗೆ ಸ್ವಂತ ತಂದೆಯೇ ವಿಷ ಕುಡಿಸಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿ ನಡೆದಿದೆ.
ಮೃತ ಮಕ್ಕಳು
ರೋಹಿತ (4) ಹಾಗೂ ಪರ್ವಿನ್ (3) ಹತ್ಯೆಯಾದ ಮಕ್ಕಳು. ತಂದೆ ಸಂಜೀವ್ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಜಮೀನೊಂದಕ್ಕೆ ಮಕ್ಕಳನ್ನು ಕರೆದ್ಯೊಯ್ದು ವಿಷ ಕುಡಿಸಿದ್ದಾನೆ ಎನ್ನಲಾಗ್ತಿದೆ. ನಂತರ ಜಮೀನಿನಲ್ಲಿಯೇ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸದ್ಯ ಸಂಜೀವ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದ ಹಿನ್ನಲೆ ಸಂಜೀವ್ ಈ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.