ಕಲಬುರಗಿ: ಮಗಳ ಮದುವೆಗೆಂದು ಮುಂಬೈನಿಂದ ಬಂದಿದ್ದ ತಂದೆಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಆತಂಕ ಮೂಡಿದೆ.
ಮಗಳ ಮದುವೆಗೆ ಮುಂಬೈನಿಂದ ಕಲಬುರಗಿಗೆ ಬಂದ ತಂದೆಗೆ ಕೊರೊನಾ: ಆತಂಕದಲ್ಲಿ ಕುಟುಂಬ - kalaburagi news
ಮುಂಬೈನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಮಗಳ ಮದುವೆಗೆಂದು ಮೇ 13ರಂದು ಕಲಬುರಗಿಗೆ ಬಂದಿದ್ದರು. ಇದೀಗ ತಂದೆಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮದುವೆ ಸಂಭ್ರಮದಲ್ಲಿದ್ದ ಕುಟುಂಬ ಆತಂಕದಲ್ಲಿದೆ.
25 ವರ್ಷಗಳಿಂದ ಸೋಂಕಿತ ವ್ಯಕ್ತಿ ಮುಂಬೈನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ. ಮೇ 29ರಂದು ಮಗಳ ಮದುವೆ ಇದ್ದ ಕಾರಣ ಕುಟುಂಬ ಸಮೇತ ಮೇ 13ರಂದು ಮುಂಬೈನಿಂದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಂಬಲಗಾ ಗ್ರಾಮಕ್ಕೆ ಬಂದಿದ್ದ. ಜಿಲ್ಲೆಗೆ ಆಗಮಿಸಿದ ಇವರನ್ನು ಜಿಲ್ಲಾಡಳಿತ ಅಂಬಲಗಾ ಗ್ರಾಮದಲ್ಲಿ ಕ್ವಾರಂಟೈನ್ ಮಾಡಿತ್ತು.
ಇವರಲ್ಲಿ ಮದುಮಗಳ ತಂದೆ (P-1967)48 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರನ್ನು ಇಎಸ್ಐ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತಂದೆಗೆ ಪಾಸಿಟಿವ್ ಬರುತ್ತಿದ್ದಂತೆ ಮಗಳ ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ತಂದೆಗೆ ಪಾಸಿಟಿವ್ ಬಂದ ಹಿನ್ನೆಲೆ ಇಡೀ ಕುಟುಂಬ ಮತ್ತೆ 14 ದಿನಗಳ ಕಾಲ ಕ್ವಾರಂಟೈನ್ ಆಗುವ ಪರಿಸ್ಥಿತಿ ಬಂದಿದೆ.