ಕಲಬುರಗಿ:ಜಿಲ್ಲೆಯ ಆಳಂದ ತಾಲೂಕಿನ ಖಾನಾಪುರ ಗ್ರಾಮದ ಬಳಿ ಕಾರು ಪಲ್ಟಿಯಾಗಿ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೃತರನ್ನು ಸ್ವಾಮಿ ಗಾಯಕ್ವಾಡ್(30) ಹಾಗೂ ತಂದೆ ಬಾಬು ಗಾಯಕ್ವಾಡ್(55) ಎಂದು ಗುರುತಿಸಲಾಗಿದೆ. ಮೂಲತಃ ಮಹಾರಾಷ್ಟ್ರದ ಅಕ್ಕಲಕೋಟ್ ನಿವಾಸಿಗಳಾದ ಇವರಿಬ್ಬರೂ ಇಂದು ಆಳಂದದಿಂದ ಅಕ್ಕಲಕೋಟ್ಗೆ ಹೋಗುವಾಗ ಅಪಘಾತ ಸಂಭವಿಸಿದೆ.
ಕಲಬುರಗಿಯಲ್ಲಿ ಕಾರು ಪಲ್ಟಿ: ಅಪ್ಪನೆದುರೇ ಪ್ರಾಣಬಿಟ್ಟ ಮಗ, ಬಳಿಕ ತಂದೆಯೂ ಸಾವು - ಆಳಂದ ತಾಲೂಕಿನ ಖಾನಾಪುರ ಗ್ರಾಮದ ಬಳಿ ಕಾರು ಪಲ್ಟಿ
ಆಳಂದ ತಾಲೂಕಿನ ಖಾನಾಪುರ ಗ್ರಾಮದ ಬಳಿ ಕಾರು ಪಲ್ಟಿಯಾಗಿ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಭವಿಸಿದೆ.
ಕಲಬುರಗಿಯಲ್ಲಿ ಕಾರು ಪಲ್ಟಿ
ಕಾರು ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ತಂದೆಯ ಎದುರಲ್ಲೇ ಮಗ ಸ್ವಾಮಿ ಕೊನೆಯುಸಿರೆಳೆದಿದ್ದಾನೆ. ಮಗನ ಸಾವನ್ನು ಕಣ್ಣಾರೆ ಕಂಡು ನರಳಾಡಿದ ತಂದೆ ಬಾಬು ಕೂಡ ಕೆಲಹೊತ್ತಲ್ಲೇ ಅಸುನೀಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಎಲ್ಲಿ ಕಳ್ಳತನ ಮಾಡಬೇಕೆಂದು ರಾತ್ರಿಯೇ ಕನಸು.. ಇವನ ಕೈಚಳಕಕ್ಕಿದೆ 30 ವರ್ಷದ ಇತಿಹಾಸ!