ಕರ್ನಾಟಕ

karnataka

ETV Bharat / state

ರೈತರು ಮಿಶ್ರ ಬೆಳೆ ಬೆಳೆದು ಆದಾಯ ಪಡೆಯಬೇಕು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ - Act of Agriculture

ಕೃಷಿ ಉತ್ಪನ್ನ ಉತ್ಪಾದನೆ, ಪ್ರೋಸೆಷಸ್, ಮಾರ್ಕೆಟಿಂಗ್​ಗೆ ಕೇಂದ್ರ ಸರ್ಕಾರ ಒತ್ತು ಕೊಡುತ್ತಿದೆ. ಇಥೇನಾಲ್ ಬೇಸ್ ಸಕ್ಕರೆ ಕಾರ್ಖಾನೆ ಆಗಬೇಕು. ಈಗಾಗಲೇ ಕೇಂದ್ರ ಸರ್ಕಾರ ಇದಕ್ಕೆ ಸೂಚನೆ ಕೊಟ್ಟಿದೆ. ತೊಗರಿ ಕಾಳಿಗೆ 6300, ಹೆಸರು ಕಾಳಿಗೆ 7200 ರೂ. ಎಂಎಸ್​ಪಿ ನಿಗದಿ ಮಾಡಲಾಗಿದೆ..

Farmers should grow mixed crop and earn income
ಶೋಭಾ ಕರಂದ್ಲಾಜೆ

By

Published : Sep 4, 2021, 3:54 PM IST

ಕಲಬುರಗಿ :ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಕಡಿಮೆ ಆಗಬೇಕಾದ್ರೆ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಕೇಂದ್ರ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ಹಲವಾರು ವರ್ಷಗಳಿಂದ ಕಷ್ಟದಲ್ಲಿದ್ದಾರೆ. ಎಷ್ಟೇ ಕೃಷಿ ಮಾಡಿದ್ರೂ ನೆಮ್ಮದಿ ಸಿಕ್ಕಿಲ್ಲ. ಕೃಷಿ ಲಾಭದಾಯಕ ಅಲ್ಲ ಎನಿಸಿದೆ. ಹೀಗಾಗಿ, ಕೃಷಿಕರ ಮಕ್ಕಳು ಕೆಲಸಕ್ಕಾಗಿ ವಲಸೆ ಹೋಗ್ತಿದ್ದಾರೆ. ಕೃಷಿಕ, ಕೃಷಿಯಲ್ಲಿರುವ ಹಾಗೆ ಮಾಡೋದು ಸವಾಲಿನ ಕೆಲಸ. ಕೇಂದ್ರ ಸರ್ಕಾರದ ಕೃಷಿ ಸವಲತ್ತುಗಳನ್ನು ರೈತರು ಪಡೆದುಕೊಳ್ಳಬೇಕು ಎಂದರು.

ರೈತರು ಮಿಶ್ರ ಬೆಳೆ ಬೆಳೆದು ಆದಾಯ ಪಡೆಯಬೇಕು ಅಂತಾರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಎಣ್ಣೆಕಾಳು ಬೀಜ ಬಿತ್ತನೆ ಮಾಡಿ : ಇಂದು ಸಮಾಜ ಮತ್ತೆ ಕೃಷಿ ಕಡೆ ಮುಖ ಮಾಡ್ತಿದೆ. 2014ರ ಚುನಾವಣೆಯಲ್ಲಿ ಯುಪಿಎ ಸರ್ಕಾರದ ಬಜೆಟ್​​ 23 ಸಾವಿರ ಕೋಟಿ ಮಾತ್ರ. 2021ರಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ 1,23,000 ಕೋಟಿ. ನಮ್ಮ ದೇಶದ ಕೃಷಿಯನ್ನ ವೈಜ್ಞಾನಿಕಗೊಳಿಸೋದು. ಕೃಷಿ ರೈತರಿಗೆ ಲಾಭದಾಯಕ ಗೊಳಿಸೋದು ನಮಗೆ ಸವಾಲಿನ ಕೆಲಸ.

ಕೃಷಿ ಉತ್ಪನ್ನ ರಫ್ತು ಮಾಡುವಲ್ಲಿ ನಾವು 9ನೇ ಸ್ಥಾನಕ್ಕೆ ಬಂದಿದ್ದೇವೆ. ಶೇ.70ರಷ್ಟು ಎಣ್ಣೆ ಕಾಳುಗಳನ್ನು ಬೇರೆ ದೇಶದಿಂದ ತರಿಸಿಕೊಳ್ಳುತ್ತಿದ್ದೇವೆ. ಎಣ್ಣೆ ಕಾಳಿನಲ್ಲಿ ನಾವು ಸ್ವಾವಲಂಬಿ ಆಗಬೇಕು. ಅದಕ್ಕಾಗಿ ಎಣ್ಣೆ ಕಾಳು ಬಿತ್ತನೆ ಬೀಜಗಳನ್ನು ನಾವು ರೈತರಿಗೆ ಉಚಿತವಾಗಿ ಕೊಡುತ್ತಿದ್ದೇವೆ ಎಂದರು.

ಇಥೇನಾಲ್​ ಬೇಸ್​​ ಸಕ್ಕರೆ ಕಾರ್ಖಾನೆ : ದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು 20.22 ಪರ್ಸೆಂಟ್. ಸಣ್ಣ ರೈತರನ್ನು ಒಟ್ಟುಗೂಡಿಸಿ ಸಂಘಗಳನ್ನು ಮಾಡುವ ಕೆಲಸ ಮಾಡಬೇಕಾಗುತ್ತದೆ. ಸಣ್ಣ ರೈತರಿಗೆ ಕೃಷಿ ಸಾಧನಗಳನ್ನು ಬಾಡಿಗೆಗೆ ಕೋಡುವ ಕೆಲಸ ಮಾಡಬೇಕಿದೆ‌.

ಕೃಷಿ ಉತ್ಪನ್ನ ಉತ್ಪಾದನೆ, ಪ್ರೋಸೆಷಸ್, ಮಾರ್ಕೆಟಿಂಗ್​ಗೆ ಕೇಂದ್ರ ಸರ್ಕಾರ ಒತ್ತು ಕೊಡುತ್ತಿದೆ. ಇಥೇನಾಲ್ ಬೇಸ್ ಸಕ್ಕರೆ ಕಾರ್ಖಾನೆ ಆಗಬೇಕು. ಈಗಾಗಲೇ ಕೇಂದ್ರ ಸರ್ಕಾರ ಇದಕ್ಕೆ ಸೂಚನೆ ಕೊಟ್ಟಿದೆ. ತೊಗರಿ ಕಾಳಿಗೆ 6300, ಹೆಸರು ಕಾಳಿಗೆ 7200 ರೂ. ಎಂಎಸ್​ಪಿ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಕೃಷಿ ಕಾಯ್ದೆ ಕುರಿತು ರೈತರು ಅರ್ಥ ಮಾಡಿಕೊಳ್ಳಬೇಕು :ದೆಹಲಿ ರೈತರ ಹೋರಾಟದ ಕುರಿತು ಪ್ರಕ್ರಿಯೆ ನೀಡಿದ ಅವರು, ಈಗಾಗಲೇ ಹನ್ನೊಂದು ಬಾರಿ ಹೋರಾಟ ನಿರತ ರೈತರ ಜೊತೆ ಮಾತುಕತೆ ಆಗಿದೆ. ರೈತರ ಜೊತೆ ಮಾತನಾಡಲು ನಾವು ಸದಾ ಸಿದ್ಧರಿದ್ದೇವೆ. ಆದ್ರೆ, ಕೃಷಿ ಕಾಯ್ದೆ ಬಿಲ್ ಯಾಕೆ ಮಾಡಿದ್ದೇವೆ ಎನ್ನುವ ಕುರಿತು ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.

ABOUT THE AUTHOR

...view details