ಕಲಬುರಗಿ: ಕೋವಿಡ್ ಹಿನ್ನೆಲೆ ಬೆಳೆ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ: ಬೆಳೆ ಸಾಲಮನ್ನಾ ಮಾಡುವಂತೆ ರೈತರಿಂದ ಒತ್ತಾಯ
ಬ್ಯಾಂಕ್ ಗಳು ಹೊಸದಾಗಿ ಬೆಳೆ ಸಾಲ ನೀಡುತ್ತಿಲ್ಲ. ಕೋವಿಡ್ ನೆಪ ಹೇಳಿ ಅನ್ನದಾತರನ್ನು ಸತಾಯಿಸುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸರ್ದಾರ್ ಪಟೇಲ್ ವೃತ್ತದಲ್ಲಿರೋ ಲೀಡ್ ಬ್ಯಾಂಕ್, ಎಸ್.ಬಿ.ಐ. ಎದುರು ಪ್ರತಿಭಟನೆ ನಡೆಸಿದ ರೈತರು ಬ್ಯಾಂಕ್ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ ಗಳು ಹೊಸದಾಗಿ ಬೆಳೆ ಸಾಲ ನೀಡದೆ, ಕೋವಿಡ್ ನೆಪ ಹೇಳಿ ಅನ್ನದಾತರನ್ನು ಸತಾಯಿಸುತ್ತಿವೆ ಎಂದು ಆರೋಪಿಸಿದರು.
ತಕ್ಷಣವೇ ಅಗತ್ಯವಿದ್ದವರಿಗೆ ಬೆಳೆ ಸಾಲ ನೀಡಬೇಕು. ಉದ್ಯೋಗಿನಿ ಸಾಲ, ಶಿಕ್ಷಣ ಸಾಲ, ಹೈನುಗಾರಿಕೆ, ಕುರಿ ಸಾಕಣೆ ಸಾಲ ಸರಳಗೊಳಿಸಲು ಆಗ್ರಹಿಸಿದ ಪ್ರತಿಭಟನಾಕಾರರು, ಅತಿವೃಷ್ಟಿಯಿಂದ ಹಾನಿಗೆ ತುತ್ತಾದ ರೈತರಿಗೆ ಪರಿಹಾರ ನೀಡಬೇಕು ಹಾಗೆಯೇ ಕೊರೊನಾ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಗುರಿಯಾಗಿರೋ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.