ಕಲಬುರಗಿ:ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ನೀತಿ ವಿರೋಧಿಸಿ ಕಲಬುರಗಿಯಲ್ಲೂ ರೈತರು ಹೆದ್ದಾರಿ ತಡೆ ನಡೆಸಿದ್ದಾರೆ.
ಕೃಷಿ ಕಾಯ್ದೆಗೆ ವಿರೋಧ; ಕಲಬುರಗಿಯಲ್ಲೂ 'ಹೆದ್ದಾರಿ ತಡೆ'ದ ರೈತರು - ಕಲಬುರಗಿ ಸುದ್ದಿ
ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ನೀತಿ ವಿರೋಧಿಸಿ ಕರೆ ನೀಡಿದ್ದ ಹೆದ್ದಾರಿ ತಡೆಗೆ ಕಲಬುರಗಿಯಲ್ಲೂ ರೈತರು ಬೆಂಬಲ ಸೂಚಿಸಿ, ತಡೆ ನಡೆಸಿದ್ದಾರೆ.

ಕಲಬುರಗಿ
ಹೆದ್ದಾರಿ ತಡೆಗೆ ಕಲಬುರಗಿಯಲ್ಲೂ ರೈತರ ಬೆಂಬಲ
ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ, ರೈತಪರ, ಕಾರ್ಮಿಕ ಪರ, ದಲಿತ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ನಗರದ ರಾಮ ಮಂದಿರ ವೃತ್ತದಲ್ಲಿ ಬೀದರ್- ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ. ಮಧ್ಯಾಹ್ನ 3 ಗಂಟೆವರೆಗೂ ಹೆದ್ದಾರಿ ತಡೆ ಪ್ರೊಟೆಸ್ಟ್ ಮುಂದುವರೆಯಲಿದೆ.
ಜಿಲ್ಲೆಯ ಆಳಂದ, ಅಫಜಲಪುರ ತಾಲೂಕಿನಲ್ಲೂ ರೈತರ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ರೈತರು, ವಿವಿಧ ಸಂಘಟನೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.