ಸೇಡಂ: ಬೆಂಗಳೂರಿಂದ ತಾಲೂಕಿನ ರಂಜೋಳ ಗ್ರಾಮಕ್ಕೆ ಮರಳಿದ ಇಬ್ಬರು ಯುವಕರು ಕೊರೊನಾ ಸೋಂಕಿತರಲ್ಲ, ಜಿಲ್ಲಾ ಗಡಿಯಲ್ಲಿ ಪರೀಕ್ಷಿಸಿ, ಕೈಗೆ ಸೀಲ್ ಹಾಕಲಾಗಿದೆ ಅಷ್ಟೇ ಎಂದು ಪಿಎಸ್ಐ ಸುಶೀಲಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ: ಯುವಕರಿಗೆ ಯಾವುದೇ ಕಾಯಿಲೆ ಇಲ್ಲ ಎಂದ ಪಿಎಸ್ಐ - ರಂಜೋಳ ಗ್ರಾಮ
ರಂಜೋಳ ಗ್ರಾಮದ ಇಬ್ಬರು ಯುವಕರು ಬೆಂಗಳೂರಿನಿಂದ ಸೇಡಂಗೆ ಬೈಕ್ ಮೂಲಕ ವಾಪಸ್ ಬಂದಿದ್ದರು. ಇವರ ಕೈನಲ್ಲಿ ಸೀಲ್ ಹಾಕಿದ್ದನ್ನನು ಗಮನಿಸಿ ಇವರಿಗೆ ಕೊರೊನಾ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ್ದರು.
![ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ: ಯುವಕರಿಗೆ ಯಾವುದೇ ಕಾಯಿಲೆ ಇಲ್ಲ ಎಂದ ಪಿಎಸ್ಐ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ](https://etvbharatimages.akamaized.net/etvbharat/prod-images/768-512-6534718-851-6534718-1585131584201.jpg)
ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ
ರಂಜೋಳ ಗ್ರಾಮದ ಇಬ್ಬರು ಯುವಕರು ಬೆಂಗಳೂರಿನಿಂದ ಸೇಡಂಗೆ ಬೈಕ್ ಮೂಲಕ ವಾಪಸ್ ಬಂದಿದ್ದರು. ಇವರ ಕೈನಲ್ಲಿ ಸೀಲ್ ಹಾಕಿದ್ದನ್ನನು ಗಮನಿಸಿ ಇವರಿಗೆ ಕೊರೊನಾ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ್ದರು.
ಈ ಹಿನ್ನೆಲೆ ಯುವಕರ ಹಳ್ಳಿಗೆ ಭೇಟಿ ನೀಡಿರುವ ಪಿಎಸ್ಐ ಅಲ್ಲಿನ ಜನರಿಗೆ ಯುವಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವಕರಿಬ್ಬರೂ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ಅವರಿಗೆ ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದ್ದಾರೆ.