ಕರ್ನಾಟಕ

karnataka

ETV Bharat / state

ಮೈತ್ರಿ ಧರ್ಮ ಪಾಲನೆ ನಮ್ಮ ಕರ್ತವ್ಯವಾಗಬೇಕು: ಬಂಡೆಪ್ಪ ಕಾಶೆಂಪೂರ - undefined

ಮೈತ್ರಿ ಮಾಡಿಕೊಂಡ ಮೇಲೆ ನಮ್ಮ ನಮ್ಮ ಹೋರಾಟಗಳಿಗೆ ಫುಲ್​​ಸ್ಟಾಪ್ ಹಾಕಬೇಕು. ಮೈತ್ರಿ ಧರ್ಮ ಪಾಲನೆ ನಮ್ಮ ಮೊಟ್ಟ ಮೊದಲ ಕರ್ತವ್ಯವಾಗಬೇಕು ಎಂದು ಬಂಡೆಪ್ಪ ಕಾಶೆಂಪೂರ ಹೇಳಿಕೆ ನೀಡಿದ್ದಾರೆ.

ಬಂಡೆಪ್ಪ ಕಾಶೆಂಪೂರ

By

Published : May 12, 2019, 9:59 PM IST

ಕಲಬುರಗಿ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಂಡೆಪ್ಪ ಕಾಶೆಂಪೂರ ಅವರು ಮೈತ್ರಿ ಮಾಡಿಕೊಂಡ ಮೇಲೆ ನಮ್ಮ ನಮ್ಮ ಹೋರಾಟಗಳಿಗೆ ಫುಲ್​​ಸ್ಟಾಪ್ ಹಾಕಬೇಕು. ಮೈತ್ರಿ ಧರ್ಮ ಪಾಲನೆ ನಮ್ಮ ಮೊಟ್ಟ ಮೊದಲ ಕರ್ತವ್ಯವಾಗಬೇಕು ಎಂದರು.

ವಿಶ್ವನಾಥ ಅವರು ದೊಡ್ಡವರು. ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವಾಗ ಒಬ್ಬರದೊಬ್ಬರು ಎಣಿಸುವುದು ತಪ್ಪು. ರಾಜ್ಯ ಸರ್ಕಾರ ಜನಪರ ಕೆಲಸ ಮಾಡುತ್ತಿದೆ.‌ ಎಲ್ಲರೂ ಇದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ರಾಹುಲ್ ಗಾಂಧಿ-ದೇವೇಗೌಡರು ಸೇರಿ ಮೈತ್ರಿಗೆ ಕಾಯಕಲ್ಪ ಕೊಟ್ಟಿದ್ದಾರೆ ಎಂದು ಹೇಳಿದರು.

ಬಂಡೆಪ್ಪ ಕಾಶೆಂಪೂರ

ನಮ್ಮಲ್ಲಿ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಅವರಿಬ್ಬರೂ ಸರಿಪಡಿಸ್ತಾರೆ. ವಿಶ್ವನಾಥ ಹೇಳಿಕೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾ‌ಮ ಆಗೋದಿಲ್ಲ. ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಿಯೇ ಪೂರೈಸುತ್ತದೆ ಎಂದರು.

For All Latest Updates

TAGGED:

ABOUT THE AUTHOR

...view details