ಕಲಬುರಗಿ: ಕೋವಿಡ್ ನಿರ್ಬಂಧದ ನಡುವೆಯೇ ರಾತ್ರೋರಾತ್ರಿ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ಜಾತ್ರೆ ನಡೆದಿದ್ದು, ರಥೋತ್ಸವದ ವೇಳೆ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಪ್ರತಿ ವರ್ಷ ಮೂರು ದಿನಗಳ ಕಾಲ ನಡೆಯುತ್ತಿದ್ದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಕೋವಿಡ್ ಹಿನ್ನೆಲೆ ನಿರ್ಬಂಧ ಹೇರಲಾಗಿತ್ತು. ಜೇವರ್ಗಿ ತಹಶೀಲ್ದಾರ್ ಬಸವರಾಜ ಬೆಣ್ಣೂರ ಹಾಗೂ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಜಾತ್ರೆ ನಡೆಸದಂತೆ ಸಲಹೆ ನೀಡಿ ಬಂದಿದ್ದರು. ಆದರೆ ಅಧಿಕಾರಿಗಳ ಕಣ್ತಪ್ಪಿಸಿ ಬೆಳಗಿನ ಜಾವ ಕತ್ತಲಿನಲ್ಲಿಯೇ ರಥೋತ್ಸವ ನಡೆಸಲಾಗಿದೆ.