ಕರ್ನಾಟಕ

karnataka

ETV Bharat / state

ಹಳೇ ರಾಜಕೀಯ ದ್ವೇಷ.. ಕಲಬುರ್ಗಿಯಲ್ಲಿ ಮಾಜಿ ಸಚಿವರೊಬ್ಬರ ಸಂಬಂಧಿಯ ಬರ್ಬರ ಕೊಲೆ.. - ಮಾಜಿ ಸಚಿವರ ಸಂಬಂಧಿಯ ಹತ್ಯೆ

ಮಾಜಿ ಸಚಿವ ದಿ. ಸಿ ಗುರುನಾಥ ಅವರ ಸಂಬಂಧಿಯನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಶಹಾಬಾದ್ ತಾಲೂಕಿನ ಮಾಲಗತ್ತಿ- ಶಂಕರವಾಡಿಯ ರಘೋಜಿ ಫ್ಯಾಕ್ಟರಿ ಬಳಿ ಹತ್ಯೆಗೈಯಲಾಗಿದೆ.

Ex minister relative murdered in kalaburagi
ಸತೀಶ್ ಕಂಬಾನೋರ

By

Published : Feb 29, 2020, 11:45 AM IST

ಕಲಬುರಗಿ : ಮಾಜಿ ಸಚಿವ ದಿ. ಸಿ ಗುರುನಾಥ ಅವರ ಸಂಬಂಧಿಯನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಶಹಾಬಾದ್ ತಾಲೂಕಿನ ಮಾಲಗತ್ತಿ- ಶಂಕರವಾಡಿಯ ರಘೋಜಿ ಫ್ಯಾಕ್ಟರಿ ಬಳಿ ಹತ್ಯೆಗೈಯಲಾಗಿದೆ.

ಮಾಜಿ ಸಚಿವರೊಬ್ಬರ ಸಂಬಂಧಿಯ ಬರ್ಬರ ಕೊಲೆ

ಮಾಜಿ ಸಚಿವ ದಿ. ಸಿ ಗುರುನಾಥ ಅವರ ಸಹೋದರನ ಪುತ್ರ ಸತೀಶ್ ಕಂಬಾನೋರ (42) ಹತ್ಯೆಯಾದ ವ್ಯಕ್ತಿ. ಹಳೆಯ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಸಚಿವರೊಬ್ಬರ ಸಂಬಂಧಿಯ ಬರ್ಬರ ಕೊಲೆ

ಸತೀಶ್ ಬೈಕ್ ಮೇಲೆ ಹೋಗುವಾಗ ಬೆನ್ನಟ್ಟಿ ಬಂದು ಕೊಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಸತೀಶ್‌ನ ಸಹೋದರ ಹಾಗೂ ಶಹಬಾದ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೋರ ಮೇಲೂ ಕೊಲೆ ಯತ್ನ ನಡೆದಿತ್ತು. ಶಹಬಾದ್‌ನಗರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಂತಕರು ಬಂಧನಕ್ಕೂ ಪೊಲೀಸರು ಜಾಲ ಬೀಸಿದ್ದಾರೆ.

ABOUT THE AUTHOR

...view details