ಕರ್ನಾಟಕ

karnataka

ETV Bharat / state

SCP-TSP ಜಾರಿ, SC-STಯವ್ರಿಗೆ ಗುತ್ತಿಗೆಯಲ್ಲೂ ಮೀಸಲಾತಿ.. ಅವ್ರಿಗೆ ₹88 ಸಾವಿರ ಕೋಟಿ ನೀಡಿದ್ದು ಇದೇ ಸಿದ್ದರಾಮಯ್ಯ.. - ವಿಪಕ್ಷ ನಾಯಕ ಸಿದ್ದರಾಮಯ್ಯ

ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ರಾಜಕೀಯ ಷಂಡ್ಯಂತ್ರವಷ್ಟೇ, ಎಸ್​ಸಿಪಿ, ಟಿಎಸ್​ಪಿ ಜಾರಿಗೆ ತಂದಿದ್ದು ಇದೇ ಸಿದ್ದರಾಮಯ್ಯ, ಗುತ್ತಿಗೆದಾರರಿಗೆ ಮೀಸಲಾತಿ ನೀಡಿದ್ದು ಇದೇ ಸಿದ್ದರಾಮಯ್ಯ, ನಮ್ಮ ಕಾಲದಲ್ಲಿ ಎಸ್​ಸಿ-ಎಸ್​ಟಿ ಸಮುದಾಯಕ್ಕೆ 88 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಆದರೆ, ಬಿಜೆಪಿಯವರು ಕೇವಲ 28 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ನಾನು ಎಸ್​ಟಿ- ಎಸ್​​ಟಿ ವಿರೋಧಿ ಅಲ್ಲ ಎಂದು ಹೇಳಿದರು..

ex cm siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : May 20, 2022, 8:03 PM IST

ಕಲಬುರಗಿ :ಬೆಂಗಳೂರಿನಲ್ಲಿ ಮಳೆ ವಿಚಾರವಾಗಿ ಸರ್ಕಾರ ಜನವರಿ, ಫೆಬ್ರುವರಿಯಲ್ಲಿಯೇ ಸಮಸ್ಯೆ ಬಗೆಹರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಆಗ ಈ ಸರ್ಕಾರ ಮಲಗಿಕೊಂಡಿತ್ತು. ಮೂರು ಕಾಸಿನ ಮುಂಜಾಗ್ರತಾ ಕ್ರಮಕೈಗೊಳ್ಳದೇ ಈಗ ಪರಿಹಾರ ಕೊಡುತ್ತೇವೆ ಅಂದ್ರೇನು ಪ್ರಯೋಜನ ಎಂದು ವಿಪಕ್ಷ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕಾಲುವೆಗಳಿಗಾಗಿ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ 1,500 ಕೋಟಿ ರೂ. ಕೊಡೋದಾಗಿ ಸರ್ಕಾರ ಹೇಳಿತ್ತು. ಈವರೆಗೆ ನಯಾಪೈಸೆ ಹಣ ಕೊಟ್ಟಿಲ್ಲ. ಈಗ ಮತ್ತೆ 1,600 ಕೋಟಿ ರೂ. ಕೊಡೋದಾಗಿ ಹೇಳುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿರುವುದು..

ಬೆಂಗಳೂರಿನ ರಾಜಕಾಲುವೆಗಳು ಹಲವೆಡೆ ಒತ್ತುವರಿಯಾಗಿವೆ. ಒತ್ತುವರಿ ತೆರವುಗೊಳಿಸಿ, ರಾಜಕಾಲುವೆ ಕ್ಲಿಯರ್ ಮಾಡದ ಹೊರತು ಇದಕ್ಕೆ ಪರಿಹಾರ ಸಾಧ್ಯವಿಲ್ಲ. ನಾವು ಅಧಿಕಾರದಲ್ಲಿದ್ದಾಗ ರಾಜಕಾಲುವೆ ತೆರವು ಕೆಲಸ ಶುರು ಮಾಡಿದ್ವಿ, ಮುಂದೆ ನಮ್ಮ ಸರ್ಕಾರ ಹೋದ ಮೇಲೆ ಬಿಜೆಪಿಯವರು ಇದನ್ನು ಮುಂದುವರೆಸಲಿಲ್ಲ. ಇದುವೇ ಇಂದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ ಎಂದರು.

ನಾನು ದಲಿತ ವಿರೋಧಿ ಅಲ್ಲ:ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ರಾಜಕೀಯ ಷಂಡ್ಯಂತ್ರವಷ್ಟೇ, ಎಸ್​ಸಿಪಿ, ಟಿಎಸ್​ಪಿ ಜಾರಿಗೆ ತಂದಿದ್ದು ಇದೇ ಸಿದ್ದರಾಮಯ್ಯ, ಗುತ್ತಿಗೆದಾರರಿಗೆ ಮೀಸಲಾತಿ ನೀಡಿದ್ದು ಇದೇ ಸಿದ್ದರಾಮಯ್ಯ, ನಮ್ಮ ಕಾಲದಲ್ಲಿ ಎಸ್​ಸಿ-ಎಸ್​ಟಿ ಸಮುದಾಯಕ್ಕೆ 88 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಆದರೆ, ಬಿಜೆಪಿಯವರು ಕೇವಲ 28 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ನಾನು ಎಸ್​ಟಿ- ಎಸ್​​ಟಿ ವಿರೋಧಿ ಅಲ್ಲ ಎಂದು ಹೇಳಿದರು.

ಇದನ್ನೂ ಓದಿ:ಮಾಜಿ ಸಿಎಂಗೆ ರಂಭಾಪುರಿ ಶ್ರೀ ಆಶೀರ್ವಾದ.. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ ಅಭಿಮಾನಿಗಳು..

ABOUT THE AUTHOR

...view details