ಕರ್ನಾಟಕ

karnataka

ETV Bharat / state

ಆಪರೇಷನ್ ಕಮಲದ ಬಗ್ಗೆ ಯಾಕೆ ಇಡಿ ತನಿಖೆ ಮಾಡ್ತಿಲ್ಲ?: ಈಶ್ವರ ಖಂಡ್ರೆ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಡಾ. ಅಜಯ್‌ಸಿಂಗ್, ಖನೀಜ್ ಫಾತೀಮಾ ಸೇರಿದಂತೆ ಹಲವರನ್ನ ಪೊಲೀಸರು ಬಂಧಿಸಿದ್ದಾರೆ.

By

Published : Jul 22, 2022, 4:32 PM IST

ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ
ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಕಲಬುರಗಿ:ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸೋನಿಯಾ ಗಾಂಧಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಉದ್ದೇಶದಿಂದ ಈ ರೀತಿ ನಡೆಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಕಲಬುರಗಿ ನಗರದಲ್ಲಿರುವ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಾಂಗದ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಮನಿ ಲಾಂಡ್ರಿಂಗ್ ಆಗಿದೆ ಅಂತಿದ್ದಾರೆ. ನಯಾ ಪೈಸೆ ವರ್ಗಾವಣೆ ಆಗಿದೆಯಾ? ಎಂದು ಪ್ರಶ್ನಿಸಿದ ಅವರು, ಕೋಟ್ಯಂತರ ರೂಪಾಯಿ ಕೊಟ್ಟು ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡಿದಿರಲ್ಲ, ಅದರ ಬಗ್ಗೆ ಯಾಕೆ ಇಡಿ ತನಿಖೆ ಮಾಡ್ತಿಲ್ಲ?. ಒಬ್ಬ ಬಿಜೆಪಿ ಮೇಲೆ ಇಡಿ ತನಿಖೆ ಮಾಡಿದ್ದಿರಾ? ಎಂದು ಪ್ರಶ್ನಿಸಿದ್ದಾರೆ.

ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಮಾತನಾಡಿರುವುದು

ರಾಹುಲ್ ಗಾಂಧಿಗೆ ವಿಚಾರಣೆ ಮಾಡಿದ್ರಿ ?. ಈಗ ಸೋನಿಯಾ ಗಾಂಧಿ ವಿಚಾರಣೆ ಮಾಡ್ತಿದ್ದಿರಾ?. ನಾವು ಯಾರಿಗೂ ಹೆದರಲ್ಲ. ಆತ್ಮಸ್ಥೈರ್ಯ ಕುಗ್ಗಿಸಲು ಇಡಿ ತನಿಖೆ ಮಾಡ್ತಿದ್ದಿರಾ ಅಷ್ಟೆ. ವಿಪಕ್ಷಗಳ ಧ್ವನಿ ಹತ್ತಿಕ್ಕಲು ಈ ರೀತಿ ತನಿಖೆ ಮಾಡ್ತಿದ್ದಿರಾ? ದ್ವೇಷದ ರಾಜಕಾರಣ ಮಾಡ್ತಿದ್ದಿರಿ. ಇದು ನಿಮಗೆ ತಿರುಗು ಬಾಣ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಶ್ರೀಲಂಕಾದ ಪರಿಸ್ಥಿತಿ ಬರುವ ಸಾಧ್ಯತೆ ಇದೆ:ಬೆಲೆ ಏರಿಕೆ ಮಾಡಿದ್ದಿರಿ. ಜನರಿಗೆ ಒಂದು ಹೊತ್ತು ಅನ್ನವೂ ಸಿಗುತ್ತಿಲ್ಲ. ಇದರಿಂದ ಜನರ ಅಟೆನ್ಷನ್ ಡೈವರ್ಟ್ ಮಾಡಲು ಇಡಿ ತನಿಖೆ ಮಾಡ್ತಿದ್ದಾರೆ. ಬಿಜೆಪಿಯ ದುರಾಡಳಿ ಮುಂದುವರಿದರೆ ಶ್ರೀಲಂಕಾದ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ಬಿಜೆಪಿ ದುರಾಡಳಿತ, ದ್ವೇಷ ರಾಜಕಾರಣದ ವಿರುದ್ದ ಕಾಂಗ್ರೆಸ್ ದೇಶಾದ್ಯಂತ ಹೋರಾಟ ಮಾಡುತ್ತಿದೆ ಎಂದರು.

ಹಲವರನ್ನ ಪೊಲೀಸರು ಬಂಧಿಸಿದ್ದಾರೆ:ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಡಾ. ಅಜಯ್‌ಸಿಂಗ್, ಖನೀಜ್ ಫಾತೀಮಾ ಸೇರಿದಂತೆ ಹಲವರನ್ನ ಪೊಲೀಸರು ಬಂಧಿಸಿದ್ದಾರೆ.

ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟ ವೇಳೆ ತಡೆದ ಪೊಲೀಸರು, ಕಾಂಗ್ರೆಸ್​ ಮುಖಂಡರು ಸೇರಿದಂತೆ ನೂರಾರು ಜನ ಕೈ ಕಾರ್ಯಕರ್ತರನ್ನ ಬಂಧಿಸಿ ಬಸ್​ನಲ್ಲಿ ಕರೆದ್ಯೊಯ್ದಿದ್ದಾರೆ. ಸೋನಿಯಾ ಗಾಂಧಿಯವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸರ್ಕಾರ ಗಾಂಧಿ ಕುಟುಂಬದ ವಿರುದ್ಧ ದ್ವೇಷದ ರಾಜಕಾರಣ ಮಾಡ್ತಿದೆಯೆಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಓದಿ:ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲ: ಕರಾವಳಿ ಭಾಗದಲ್ಲಿ ಮುಂದುವರಿದ ವರ್ಷಧಾರೆ

ABOUT THE AUTHOR

...view details