ಕಲಬುರಗಿ: ಜಿಲ್ಲೆಯ ಅಪ್ಪಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ತಂದೆ ತಾಯಿಗೆ ಪಾದಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮೋಟಿವೇಶನಲ್ ಸ್ಪೀಕರ್ ಸತೀಶ್ ಆರ್ ಅವರು ವಿದ್ಯಾರ್ಥಿಗಳಿಗೆ ಪಾದಪೂಜೆಯ ವಿಧಿವಿಧಾನಗಳನ್ನು ಹೇಳಿಕೊಟ್ಟರು ಹಾಗೂ ತಾಯಿಗೆ ಮಮ್ಮಿ ಎನ್ನದೆ ಅಮ್ಮ ಎಂದು ಕರೆಯಬೇಕೆಂದು ಮನವರಿಕೆ ಮಾಡಿಕೊಟ್ಟರು.
ಎಲ್ಲಾ ವಿದ್ಯಾರ್ಥಿಗಳು ಮೊದಲಿಗೆ ತಮ್ಮ ತಂದೆ ತಾಯಿಯ ಪಾದಗಳನ್ನು ತೊಳೆದು, ಕುಂಕುಮ ಹಚ್ಚಿ, ಪುಷ್ಪಗಳನ್ನಿಟ್ಟು, ಗಂಧದ ಕಡ್ಡಿ, ಕರ್ಪೂರದಾರತಿ ಬೆಳಗಿ ಆಶೀರ್ವಾದ ಪಡೆದರು. ಸತೀಶ್ ಅವರು ಕ್ರಮವಾಗಿ ಮಂತ್ರ ಘೋಷಣೆ, ಹಾಡುಗಳನ್ನು ಹಾಡಿ ಮಕ್ಕಳನ್ನು ಉತ್ತೇಜಿಸಿದರು.