ಕಲಬುರಗಿ: ಗ್ರಾಮ ಪಂಚಾಯತ್ ಮಹಿಳಾ ಅಭ್ಯರ್ಥಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಶುಭ ಸಮಾಚಾರ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಕೇಳಿ ಬಂದಿದೆ.
ಮತದಾನ ದಿನವೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ.. ಅಭ್ಯರ್ಥಿಯಾಗಿರುವ ಅಮ್ಮನಿಗೆ ಅದೃಷ್ಟ ತರುತ್ತಾ!? - ಗ್ರಾಮ ಪಂಚಾಯ್ತಿ ಚುನಾವಣೆ ಲೇಟೆಸ್ಟ್ ನ್ಯೂಸ್
ಅತ್ತೆ ವಾರ್ಡ್ ಸಂಖ್ಯೆ 3ರಲ್ಲಿ ಸ್ಪರ್ಧೆ ಮಾಡಿದ್ರೆ, ಸೊಸೆ ಮಂಜುಳಾ ವಾರ್ಡ್ ನಂ.4ರಿಂದ ಸ್ಪರ್ಧೆ ಮಾಡಿದ್ದಾರೆ. ಇದೀಗ ಮನೆಗೆ ಮಹಾಲಕ್ಷ್ಮಿ ರೂಪದಲ್ಲಿ ಹೆಣ್ಣು ಮಗು ಬಂದಿದೆ..
ಕಲಬುರಗಿ
ಇಂಗಳಗಿ ಗ್ರಾಮದ ವಾರ್ಡ್ ನಂ.4ರ ಅಭ್ಯರ್ಥಿ ಮಂಜುಳಾ ಗುಡುಬಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಕ್ಷೇಮವಾಗಿದ್ದಾರೆ. ಮಂಜುಳಾ ಹಾಗೂ ಅವರ ಅತ್ತೆ ಇಬ್ಬರು ಕಣದಲ್ಲಿದ್ದಾರೆ.
ಅತ್ತೆ ವಾರ್ಡ್ ಸಂಖ್ಯೆ 3ರಲ್ಲಿ ಸ್ಪರ್ಧೆ ಮಾಡಿದ್ರೆ, ಸೊಸೆ ಮಂಜುಳಾ ವಾರ್ಡ್ ನಂ.4ರಿಂದ ಸ್ಪರ್ಧೆ ಮಾಡಿದ್ದಾರೆ. ಇದೀಗ ಮನೆಗೆ ಮಹಾಲಕ್ಷ್ಮಿ ರೂಪದಲ್ಲಿ ಹೆಣ್ಣು ಮಗು ಬಂದಿದ್ದು, ಗೆಲುವು ಕೂಡ ನಮ್ಮ ಮನೆಗೆ ಬರಲಿದೆ ಅಂತಾ ಕುಟುಂಬಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.