ಕಲಬುರಗಿ: ಆರ್‌ಎಸ್‌ಎಸ್ ಅನ್ನೋದು 1925ರಲ್ಲಿ ಶುರುವಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಟೀಕೆಗಳ ಮಧ್ಯೆಯೇ ಬೆಳೆದುಕೊಂಡು ಬಂದಿದೆ. ಯಾರೇ ಏನು ಮಾತನಾಡಿದರೂ ಆರ್‌ಎಸ್‌ಎಸ್ ಆಗಲಿ, ನಾವಾಗಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಬಗ್ಗೆ ಟೀಕೆ ವಿಚಾರ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದು ಸುಪ್ರಿಂ ಕೋರ್ಟ್, ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ ಮೇಲೂ ಇವತ್ತಿಗೂ ಕಾಂಗ್ರೆಸ್‌ನವರು ಆರೋಪ ಮಾಡುತ್ತಲೇ ಇದ್ದಾರೆ ಎಂದರು.
ಯಾವುದೋ ಒಂದು ಧರ್ಮವನ್ನು ಅವಹೇಳನ ಮಾಡಲು ಏನ್ ಬೇಕಾದ್ರೂ ಕಾಂಗ್ರೆಸ್‌ನವರು ಹೇಳುತ್ತಾರೆ. ಸಂಘ ಬೆಳೆದಿರೋದೇ ವಿರೋಧದ ನಡುವಿನ ಪ್ರಪಂಚದಲ್ಲಿ. ಭಾರತಕ್ಕೆ ಯಾವ ಬೆಲೆಯಿತ್ತೋ ಆ ಬೆಲೆಯನ್ನ ಮತ್ತೊಮ್ಮೆ ತಂದು ಕೋಡೋಕೆ ಮುಂದಾಗಿದೆ. ವಿತ್ ಯೂ , ವಿತ್ ಔಟ್ ಯೂ , ಅಗೆನೆಸ್ಟ್ ಯೂ ಎಂದು ಸಂಘ ಸ್ಪಷ್ಟವಾಗಿ ಹೇಳಿದೆ ಎಂದ ಸಚಿವರು, ದೇಶಕ್ಕಾಗಿ ಮಾಡುತ್ತಿರುವ ಕೆಲಸ ಮುಂದುರೆಯುತ್ತದೆ. ವಿರೋಧಗಳ ಬಗ್ಗೆ ಆರ್‌ಎಸ್‌ಎಸ್ ತಲೆ ಕೆಡಿಸಿಕೊಳ್ಳಲ್ಲ, ನಾವೂ ತಲೆಕೆಡಿಸಿಕೊಳ್ಳಲ್ಲ ಎಂದು ತೀರುಗೇಟು ನೀಡಿದ್ದಾರೆ.