ಕಲಬುರಗಿ: ವೈದ್ಯರ ಸಲಹೆ ಕಡೆಗಣಿಸಿ ಹೋಮ್ ಐಸೊಲೇಷನ್‌ನಿಂದ ಹೊರಬಂದು ತಿರುಗಾಡುತ್ತಿದ್ದ ಯುವಕನನ್ನು ತಾಲೂಕು ಆಸ್ಪತ್ರೆಯಲ್ಲಿನ ವಾರ್ಡ್‌ಗೆ ಶಿಫ್ಟ್ ಮಾಡಿರುವ ಘಟನೆ ಚಿತ್ತಾಪೂರನಲ್ಲಿ ನಡೆದಿದೆ.
ಕಳೆದ 11 ದಿನಗಳ ಹಿಂದೆ, ಮಾರ್ಚ್ 4 ರಂದು ದುಬೈನಿಂದ ಹೈದರಾಬಾದ್ಗೆ ಬಂದಿಳಿದ ಚಿತ್ತಾಪೂರ ತಾಲೂಕಿನ 21 ವರ್ಷದ ಯುವಕನಾಗಿದ್ದು, ಹೈದರಾಬಾದ್ನಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ಎರಡು ದಿನಗಳ ಹಿಂದಷ್ಟೆ ಸ್ವಗ್ರಾಮಕ್ಕೆ ಮರಳಿದ್ದಾನೆ.
ವೈದ್ಯರ ಸಲಹೆ ಧಿಕ್ಕರಿಸಿದ ದುಬೈ ರಿಟರ್ನ್ ನೆಗಡಿ ಕಂಡು ಬಂದ ಹಿನ್ನೆಲೆ ಮೊದಲು ಹೋಮ್ ಐಸೊಲೇಷನ್ನಲ್ಲಿ ಇಡಲಾಗಿತ್ತು. ಆದರೆ, ವೈದ್ಯರ ಸಲಹೆ ಕಡೆಗಣಿಸಿ ಗ್ರಾಮದ ತುಂಬ ಸಂಚರಿಸುತ್ತಿದ್ದ ಕಾರಣ ಆತನನ್ನು ಚಿತ್ತಾಪುರದ ಐಸೊಲೇಷನ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಯು ಎಲ್ಲೆಂದರಲ್ಲಿ ತಿರುಗಾಡಿದ್ದರಿಂದ ಕೋಣೆಯಲ್ಲಿ ಹಾಕಿ ಲಾಕ್ ಮಾಡಲಾಗಿದೆ.
ಕಲಬುರಗಿಯಲ್ಲಿ ಲ್ಯಾಬ್ ಪರೀಕ್ಷೆಗೆ ಗಂಟಲು ದ್ರವ ಮಾದರಿ ಪಡೆದು, ಮರಳಿ ಚಿತ್ತಾಪುರ ಐಸೊಲೇಷನ್ ವಾರ್ಡ್ನಲ್ಲಿ ಇಡಲಾಗುವದು ಎಂದು ತಾಲೂಕು ವೈದ್ಯಾಧಿಕಾರಿ ಸುರೇಶ್ ಮೇಕಿನ್ ಮಾಹಿತಿ ನೀಡಿದ್ದಾರೆ.