ಕರ್ನಾಟಕ

karnataka

ETV Bharat / state

ಬೆಚ್ಚಿಬಿತ್ತು ಕಲಬುರಗಿ: ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆ - ಕಲಬುರಗಿಯಲ್ಲಿ ಬರ್ಬರ ಕೊಲೆ

ಕಲಬುರಗಿ ನಗರದ ಖರ್ಗೆ ಕಾಲೋನಿಯ ನಿವಾಸಿ ಪ್ರಶಾಂತ್​ ಎಂಬುವವರನ್ನು ಸ್ನೇಹಿತರೇ ಕುಡಿದ ಅಮಲಿನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆಗೈದ ಆರೋಪಿಗಳು

By

Published : Sep 20, 2019, 12:56 AM IST

ಕಲಬುರಗಿ: ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಸ್ನೇಹಿತನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು, ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಹೈಕೋರ್ಟ್​ ಹಿಂಭಾಗದ ಖರ್ಗೆ ಕಾಲೋನಿಯಲ್ಲಿ ನಡೆದಿದೆ.

ಖರ್ಗೆ ಕಾಲೋನಿ ನಿವಾಸಿ ಪ್ರಶಾಂತ್​ ಎಂಬಾತ ಕೊಲೆಗೀಡಾದ ವ್ಯಕ್ತಿಯಾಗಿದ್ದು, ಮಹೇಶ ದೊಭಿ ಹಾಗೂ ವಿನೋದ ಎಂಬುವವರನ್ನು ಈ ಸಂಬಂಧ ಬಂಧಿಸಲಾಗಿದೆ.

ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆಗೈದ ಆರೋಪಿಗಳು

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ ಅಲಿಯಾಸ್ ಬಿಲ್ಡರ್ ಪ್ರಶಾಂತ್ ತನ್ನ ಸ್ನೇಹಿತರಾದ ಮಹೇಶ್ ಹಾಗೂ ವಿನೋದ ಅನ್ನು ಮನೆಯಲ್ಲಿಯೆ ಪಾರ್ಟಿ ಮಾಡಲು ಕರೆದಿದ್ದಾನೆ. ಕುಡಿದ ಅಮಲಿನಲ್ಲಿ ಜಗಳವಾಡಿದ ಸ್ನೇಹಿತರು ಪ್ರಶಾಂತ್ ಅನ್ನು ಕೊಲೆಗೈದಿದ್ದಾರೆ.

ಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕಾಗಿ ಕೊಲೆ ನಡೆದಿದೆ ಎನ್ನಲಾಗಿದ್ದು, ಪೊಲೀಸರ ತನಿಖೆಯಿಂದಲೇ ಇನ್ನಷ್ಟು ಸತ್ಯ ಹೊರಬೀಳಬೇಕಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details