ಕಲಬುರಗಿ:ಬಂಜಾರ ಸಮಾಜದ ಡಾ. ರಾಮರಾವ್ ಮಹಾರಾಜರ ಅಸ್ತಂಗತಕ್ಕೆ ಕಲಬುರಗಿ ಸಂಸದ ಉಮೇಶ್ ಜಾಧವ್ ಸಂತಾಪ ಸೂಚಿಸಿದ್ದಾರೆ.
ಬಂಜಾರ ಸಮಾಜದ ಡಾ. ರಾಮರಾವ್ ಮಹಾರಾಜ ಅಸ್ತಂಗತ: ಸಂಸದ ಜಾಧವ್ ಸಂತಾಪ - Banjara community' Dr. Ramarav Maharaj No more
ಬಂಜಾರ ಸಮಾಜದ ಡಾ. ರಾಮರಾವ್ ಮಹಾರಾಜ ಅಸ್ತಂಗತರಾಗಿದ್ದು, ಕಲಬುರಗಿ ಸಂಸದ ಉಮೇಶ್ ಜಾಧವ್ ಸಂತಾಪ ಸೂಚಿಸಿದ್ದಾರೆ. ಮಹಾರಾಜರ ಅಂತಿಮ ದರ್ಶನಕ್ಕೆ ಕಲಬುರಗಿ ಜಿಲ್ಲೆಯ ಪ್ರತಿ ತಾಲೂಕಿನಿಂದ ಪೌರಾದೇವಿಗೆ ಎನ್‌ಈಕೆಎಸ್‌ಆರ್‌ಟಿಸಿಯಿಂದ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ.
ಪೂಜ್ಯರ ಲಿಂಗೈಕ್ಯದ ವಿಷಯ ತೀವ್ರ ಆಘಾತ ತಂದಿದೆ. ನಮ್ಮ ಸಮಾಜದ ಆರಾಧ್ಯ ದೈವ, ನನ್ನ ಗುರುಗಳು ಬಂಜಾರಾ ಸಮಾಜದ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಮಹಾರಾಜರು ನಮ್ಮನ್ನು ಅಗಲಿದ್ದು ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರನ್ನು ಕಳೆದುಕೊಂಡು ಅನಾಥರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದಿಂದ ನೇರವಾಗಿ ಪೌರಾದೇವಿಗೆ ತೆರಳುವುದಾಗಿ ಹೇಳಿದ್ದಾರೆ.
ಡಾ. ರಾಮರಾವ್ ಮಹಾರಾಜರ ಅಂತಿಮ ದರ್ಶನಕ್ಕೆ ಕಲಬುರಗಿ ಜಿಲ್ಲೆಯ ಪ್ರತಿ ತಾಲೂಕಿನಿಂದ ಪೌರಾದೇವಿಗೆ ಎನ್‌ಈಕೆಎಸ್‌ಆರ್‌ಟಿಸಿಯಿಂದ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ಮೂಲಕ ಅಂತಿಮ ದರ್ಶನ ಪಡೆಯಬೇಕೆಂದು ಭಕ್ತರಲ್ಲಿ ಜಾಧವ್ ಮನವಿ ಮಾಡಿಕೊಂಡಿದ್ದಾರೆ.