ಕಲಬುರಗಿ: ಸಂಸದ ಡಾ. ಉಮೇಶ್ ಜಾಧವ್ ಹಾಗೂ ಅವರ ಪುತ್ರ ಚಿಂಚೋಳಿಯ ಶಾಸಕ ಡಾ. ಅವಿನಾಶ್ ಜಾಧವ್ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಂಸದ ಉಮೇಶ್ ಜಾಧವ್ ಮತ್ತು ಪುತ್ರನಿಗೆ ಕೊರೊನಾ ಸೋಂಕು - Dr.Umesh Jadhav news
ಸಂಸದ ಡಾ. ಉಮೇಶ್ ಜಾಧವ್ ಹಾಗೂ ಅವರ ಪುತ್ರ ಶಾಸಕ ಡಾ. ಅವಿನಾಶ್ ಜಾಧವ್ಗೆ ಕೊರೊನಾ ಸೋಂಕು ತಗುಲಿದ್ದು, ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಮೇಶ್ ಜಾಧವ್ ಮತ್ತು ಪುತ್ರನಿಗೆ ಕೊರೊನಾ ಸೋಂಕು
ಈ ಕುರಿತು ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ಉಮೇಶ್ ಜಾಧವ್, ತಮಗೆ ಹಾಗೂ ತಮ್ಮ ಪುತ್ರ ಅವಿನಾಶ್ಗೆ ಕೊರೊನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದಾರೆ.
ಇತ್ತೀಚೆಗೆ ನಮ್ಮ ಸಂಪರ್ಕದಲ್ಲಿದ್ದವರು ಕೂಡ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಸದ್ಯ ಉಮೇಶ್ ಜಾಧವ್ ಹಾಗೂ ಅವಿನಾಶ್ ಜಾಧವ್ ಇಬ್ಬರು ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.