ಕಲಬುರಗಿ: ಕ್ಯಾನ್ಸರ್ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ಕ್ಯಾನ್ಸರ್ ಕಾಣಿಸಿಕೊಂಡ ಆರಂಭದಲ್ಲೇ ತಡೆಯಬಹದು ಎಂದು ಹಿರಿಯ ವೈದ್ಯ, ಕ್ಯಾನ್ಸರ್ ತಜ್ಞ ಡಾ. ಶಾಂತಲಿಂಗ ನಿಗ್ಗುಡಗಿ ತಿಳಿಸಿದರು.
ಈ ಕುರಿತು ಹೆಚ್ಸಿಜಿ ಆಸ್ಪತ್ರೆಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವಾಹನಗಳ ಮಾಲಿನ್ಯ, ಧೂಮಪಾನ ಮಾಡುವುದರಿಂದ ಶ್ವಾಸಕೋಶ ಕ್ಯಾನ್ಸರ್ ಉಂಟಾಗುತ್ತದೆ. ಇನ್ನು ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳ ಕಾರ್ಮಿಕರಿಗೂ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಆದರೆ, ಆರಂಭದ ಹಂತದಲ್ಲೇ ಪತ್ತೆ ಹಚ್ಚಿದರೆ ಇದನ್ನು ಗುಣಪಡಿಸಬಹುದು ಎಂದು ತಿಳಿಸಿದ್ದಾರೆ.