ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆ ಸರಳವಾಗಿರಲಿ; ಡಿಸಿ ಜ್ಯೋತ್ಸ್ನಾ ಮನವಿ

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 20 ಜನರಿಗೆ ರೂಪಾಂತರ ಕೊರೊನಾ ವೈರಸ್​ ಸೋಂಕು ತಗುಲಿದೆ. ಈ ರೂಪಾಂತರ ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆ ಹೊಸ ವರ್ಷಾಚರಣೆ ಸರಳವಾಗಿರಲಿ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.

DC VV Jyostna
ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ

By

Published : Dec 30, 2020, 1:46 PM IST

ಕಲಬುರಗಿ: ರೂಪಾಂತರ ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆ ಹೊಸ ವರ್ಷಾಚರಣೆ ಸರಳವಾಗಿರಲಿ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ

ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಮಾಡುವುದು ಬೇಡ. ತಮ್ಮ-ತಮ್ಮ ಮನೆಗಳಲ್ಲಿಯೇ ಕುಟುಂಬದ ಜೊತೆ ಮಾತ್ರ ಹೊಸ ವರ್ಷಾಚರಣೆಯ ಕ್ಷಣಗಳನ್ನು ಕಳೆಯಿರಿ ಎಂದು ಸಲಹೆ ನೀಡಿದ್ದಾರೆ. ಕೊರೊನಾ ಹಿನ್ನೆಲೆ ಜನರು ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ರೂಪಾಂತರ ಕೊರೊನಾ ಅಬ್ಬರ : 20 ಮಂದಿಗೆ ತಗುಲಿದ ಪರಿವರ್ತಿತ ಸೋಂಕು

ಹೊಸ ವರ್ಷಾಚರಣೆ ತಡೆಯಲು ಸೆಕ್ಷನ್​​​ 144 ಅನುಷ್ಠಾನ ಮಾಡಲಾಗುತ್ತಿಲ್ಲ. ರಾತ್ರಿ ಕರ್ಫ್ಯೂ ಸಹ ಹಿಂದಕ್ಕೆ ಪಡೆಯಲಾಗಿದೆ. ಬಾರ್ & ರೆಸ್ಟೋರೆಂಟ್​​​​ಗಳಲ್ಲಿ ಇವೆಂಟ್ಸ್​​​ ನಡೆಸಲು ಅವಕಾಶ ಇರುವದಿಲ್ಲ. ಬಾರ್ & ರೆಸ್ಟೋರೆಂಟ್​​ಗಳ ಕ್ಲೋಸಿಂಗ್​​​ ಟೈಮಿಂಗ್ಸ್​​​ ನಿತ್ಯದಂತೆ ಇರಲಿದೆ. ಹೊಸ ವರ್ಷಕ್ಕಾಗಿ ಹೊಸ ನಿಯಮಗಳೇನೂ ಇಲ್ಲ. ಆದರೆ ಜನರು ಮಾತ್ರ ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಆಚರಣೆ ಮಾಡುವಂತೆ ಡಿಸಿ ಮನವಿ ಮಾಡಿದ್ದಾರೆ.

ABOUT THE AUTHOR

...view details