ಕಲಬುರಗಿ: ಡಿಕೆಶಿ ಹಾಗೂ ಅವರ ಪುತ್ರಿ ಮೇಲಿರುವ ಆರೋಪ ಮುಕ್ತಗೊಳ್ಳುವಂತೆ ಪ್ರಾರ್ಥಿಸಿ ಅವರ ಅಭಿಮಾನಿಗಳು ಗಾಣಗಾಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಆರೋಪ ಮುಕ್ತರಾಗಿ ಬರಲಿ: ಡಿಕೆಶಿ ಅಭಿಮಾನಿಗಳಿಂದ ಗಾಣಗಾಪುರದಲ್ಲಿ ವಿಶೇಷ ಪೂಜೆ! - ಕಲಬುರಗಿ
ಇಬ್ಬರು ಕೂಡ ಇಡಿ ತನಿಖೆ ಸಮರ್ಥವಾಗಿ ಎದುರಿಸಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು.
ಡಿಕೆಶಿ ಅಭಿಮಾನಿಗಳಿಂದ ಪೂಜೆ
ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇವರ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು, ಇಬ್ಬರು ಇಡಿ ತನಿಖೆ ಸಮರ್ಥವಾಗಿ ಎದುರಿಸಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಪ್ರಾರ್ಥನೆ ಮಾಡಿದರು.
ಈ ಹಿಂದೆ ಡಿಕೆಶಿ ಐಟಿ ದಾಳಿಗೆ ಒಳಗಾದಾಗ, ಗುರುಜೀ ದ್ವಾರಕಾನಾಥರ ಸೂಚನೆಯಂತೆ ಗಾಣಗಾಪುರಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ಈ ಹಿನ್ನೆಲೆ ಇದೀಗ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.