ಕಲಬುರಗಿ :ಕೊರೊನಾ ಸೋಂಕಿನ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ಮೋದಿ ದೀಪ ಬೆಳಗಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಸಿದ್ಧತೆಗಳು ಭರದಿಂದ ನಡೆದಿವೆ. ಗೃಹಿಣಿಯರು ದೀಪ ಬೆಳಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೋದಿ ಕರೆಯಂತೆ ಜಿಲ್ಲೆಯ ಜನ ದೀಪಾವಳಿ ಹಬ್ಬದಂತೆ ಆಚರಿಸಲು ಸಿದ್ಧರಾಗಿದ್ದಾರೆ.
ಕೊರೊನಾ ವಿರುದ್ಧ 'ದೀಪ' ದ ಸಮರ.. ಕಲಬುರಗಿ ಮಹಿಳೆಯರ ಸಿದ್ಧತೆ.. - ಮೋದಿ ಕರೆಗೆ ಕಲಬುರಗಿಯಲ್ಲಿ ದೀಪಾವಳಿ ಸಂಭ್ರಮ.
ಇಂದು ರಾತ್ರಿ ದೇಶಾದ್ಯಂತ ಒಂಬತ್ತು ಗಂಟೆಗೆ ವಿದ್ಯುತ್ ದೀಪ ಆರಿಸಿ, ಮೇಣದ ದೀಪ, ಟಾರ್ಚ್ ಉರಿಸುವಂತೆ ಮೋದಿ ಕರೆ ನೀಡಿದ್ದಾರೆ. ಪರಿಣಾಮ ಗೃಹಿಣಿಯರು ಭರದಿಂದ ಸಿದ್ಧತೆ ನಡೆಸಿಕೊಂಡಿದ್ದಾರೆ.
![ಕೊರೊನಾ ವಿರುದ್ಧ 'ದೀಪ' ದ ಸಮರ.. ಕಲಬುರಗಿ ಮಹಿಳೆಯರ ಸಿದ್ಧತೆ.. Diwali' war against Corona](https://etvbharatimages.akamaized.net/etvbharat/prod-images/768-512-6668670-1059-6668670-1586067923189.jpg)
ಕೊರೊನಾ ವಿರುದ್ಧ 'ದೀಪ' ದ ಸಮರ
ಇಂದು ರಾತ್ರಿ ದೀಪ ಬೆಳಗಲು ಸಿದ್ಧತೆ..
ನಗರದ ಹಲವು ಕಡೆಗಳಲ್ಲಿ ಬೆಳಗ್ಗೆಯಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜಾತಿ-ಧರ್ಮ ಮರೆತು ದೀಪ ಬೆಳಗೋಣ ಎನ್ನುತ್ತಿದ್ದಾರೆ. ನಗರದ ಜಗತ್ ಬಡಾವಣೆಯಲ್ಲಿ ಬೆಳಗ್ಗೆಯಿಂದಲೇ ದೀಪಗಳ ತಯಾರಿ ಜೋರಾಗಿದೆ.