ಕರ್ನಾಟಕ

karnataka

ETV Bharat / state

ಮಾಸ್ಕ್​ ಧರಿಸದವರಿಗೆ 100 ರೂ. ದಂಡ ವಿಧಿಸಿ, ಮಾಸ್ಕ್​ ನೀಡಿ ಜಿಲ್ಲಾಧಿಕಾರಿ ಜಾಗೃತಿ

ಮಾಸ್ಕ್ ಕುರಿತು ಜಾಗೃತಿಗೆ ಮುಂದಾದ ಜಿಲ್ಲಾಧಿಕಾರಿ, ನಗರದಲ್ಲಿ ಸಂಚರಿಸುತ್ತಿದ್ದ ಸಿಟಿ ಬಸ್ಸಿನೊಳಗೆ ತೆರಳಿ ಪ್ರಯಾಣಿಕರಿಗೆ ​​ಮಾಸ್ಕ್ ಧರಿಸುವಂತೆ ಸೂಚಿಸಿದರು. ಅಲ್ಲದೆ, ಬಸ್ಸಿನಲ್ಲಿ ಮಾಸ್ಕ್​ ಇಲ್ಲದೆ ಕುಳಿತಿದ್ದ ವೃದ್ದರಿಗೆ ಉಚಿತವಾಗಿ ಮಾಸ್ಕ್ ನೀಡಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು..

District Commissioner
ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

By

Published : Nov 6, 2020, 2:42 PM IST

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ ಸಹ ಜನ ಮಾಸ್ಕ್ ಧರಿಸುವ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದನ್ನು ತಡೆಯಲು ಸ್ವತಃ ಜಿಲ್ಲಾಧಿಕಾರಿಗಳೇ ರಸ್ತೆಗಿಳಿದು ದಂಡ ವಸೂಲಿ ಮಾಡುವುದರ ಜೊತೆಗೆ ಉಚಿತವಾಗಿ ಮುಖಗವಸು ನೀಡಿ ಕೊರೊನಾ ಕುರಿತು ಜಾಗೃತಿ ಮೂಡಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯಿಂದ ನಗರದೆಲ್ಲೆಡೆಗೆ ತೆರಳಿದ ಜಿಲ್ಲಾಧಿಕಾರಿ ಜ್ಯೋತ್ಸ್ನಾ, ಜಗತ್ ವೃತ್ತ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವೆಡೆ ಸಂಚರಿಸಿ ಮಾಸ್ಕ್​ ಧರಿಸದವರಿಗೆ 100 ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೆ, ಈ ವೇಳೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಉಚಿತವಾಗಿ ಮಾಸ್ಕ್ ನೀಡಿ, ಮನೆಯಿಂದ ಹೊರ ಬರುವಾಗ ಮಾಸ್ಕ್​ ಧರಿಸುವುದನ್ನು ಮರಿಯಬೇಡಿ ಎಂದು ತಿಳಿ ಹೇಳಿದ್ದಾರೆ.

ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಎರಡಂಕಿಗೆ ಇಳಿದಿದೆಯಾದರೂ ಸಹ ಕೊರೊನಾವನ್ನು ಸರಳವಾಗಿ ಪರಿಗಣಿಸಲಾಗದು. ನೆರೆ ರಾಜ್ಯದಲ್ಲಿ ಈ ಹಿಂದೆ ಕೊರೊನಾ ಸಂಖ್ಯೆ ಕಡಿಮೆಯಾಗಿ ಈಗ ಪುನಃ ಹೆಚ್ಚುತ್ತಿವೆ‌. ಈ ನಿಟ್ಟಿನಲ್ಲಿ ಯಾರು ಕೂಡ ಕೊರೊನಾವನ್ನು ಸರಳವಾಗಿ ತೆಗೆದುಕೊಳ್ಳದೆ ತಮ್ಮ ಕುಟುಂಬದ ಆರೋಗ್ಯಕ್ಕಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು.

ಬಸ್ ಪ್ರಯಾಣಿಕರಿಗೆ ಉಚಿತ ಮಾಸ್ಕ್ ನೀಡಿದ ಡಿಸಿ :

ಮಾಸ್ಕ್ ಕುರಿತು ಜಾಗೃತಿಗೆ ಮುಂದಾದ ಜಿಲ್ಲಾಧಿಕಾರಿ, ನಗರದಲ್ಲಿ ಸಂಚರಿಸುತ್ತಿದ್ದ ಸಿಟಿ ಬಸ್ಸಿನೊಳಗೆ ತೆರಳಿ ಪ್ರಯಾಣಿಕರಿಗೆ ​​ಮಾಸ್ಕ್ ಧರಿಸುವಂತೆ ಸೂಚಿಸಿದರು. ಅಲ್ಲದೆ, ಬಸ್ಸಿನಲ್ಲಿ ಮಾಸ್ಕ್​ ಇಲ್ಲದೆ ಕುಳಿತಿದ್ದ ವೃದ್ದರಿಗೆ ಉಚಿತವಾಗಿ ಮಾಸ್ಕ್ ನೀಡಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದ ವೇಳೆ ಜಿಲ್ಲಾಧಿಕಾರಿಗೆ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಎಸಿಪಿ ಅನ್ಶುಕುಮಾರ್ ಸಾಥ್ ನೀಡಿದರು.

ABOUT THE AUTHOR

...view details