ಕಲಬುರಗಿ:ಫೆಬ್ರವರಿ 5, 6 ಮತ್ತು 7 ರಂದು ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಧಿಕಾರಿ ಬಿ. ಶರತ್ ಅವರು ತಮ್ಮ ಒಂದು ತಿಂಗಳ ವೇತನ 97,461/- ರೂ. ದೇಣಿಗೆ ನೀಡಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಿಂಗಳ ವೇತನವನ್ನ ದೇಣಿಗೆ ನೀಡಿದ ಜಿಲ್ಲಾಧಿಕಾರಿ - ತಿಂಗಳ ವೇತನವನ್ನ ದೇಣಿಗೆ ನೀಡಿದ ಜಿಲ್ಲಾಧಿಕಾರಿ
ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಧಿಕಾರಿ ಬಿ. ಶರತ್ ಅವರು ತಮ್ಮ ಒಂದು ತಿಂಗಳ ವೇತನ 97,461/- ರೂ. ದೇಣಿಗೆ ನೀಡಿದ್ದಾರೆ.
ಇಂದು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಜಿಲ್ಲಾ ಕಸಾಪ ಕಾರ್ಯಕಾರಣಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಅವರಿಗೆ ತಿಂಗಳ ಸಂಬಳದ ಚೆಕ್ ಹಸ್ತಾಂತರಿಸಿದರು. ಇದೆ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಅವರು ಸಹ ತಮ್ಮ ಒಂದು ದಿನದ ವೇತನವನ್ನು ನುಡಿ ಹಬ್ಬಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿದರು.
ಸಂಕ್ರಾಂತಿ ಹಬ್ಬದ ನಿಮಿತ್ತವಾಗಿ ಸಭೆಗೆ ಅಗಮಿಸಿದ ಸರ್ವ ಸದಸ್ಯರನ್ನು ಡಿಸಿ ಶರತ್ ಅವರು ಎಳ್ಳು-ಬೆಲ್ಲ ಹಂಚಿ ಸಂಕ್ರಮಣದ ಹಬ್ಬದ ಶುಭಾಶಯ ಕೋರಿದರು.
TAGGED:
ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್