ಕಲಬುರಗಿ:ಮಹಾನಗರ ಪಾಲಿಕೆ ಚುನಾವಣೆಗೆ ಶುಕ್ರವಾರ ಬೆಳಿಗ್ಗೆಯಿಂದ ವೋಟಿಂಗ್ ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಸುಮಾರು 55 ಸದಸ್ಯ ಬಲ ಹೊಂದಿರುವ ಕಲಬುರಗಿ ಪಾಲಿಕೆ ಚುನಾವಣೆ ಅಖಾಡದಲ್ಲಿ 300 ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್-55, ಬಿಜೆಪಿ- 47, ಜೆಡಿಎಸ್- 46, ಆಮ್ ಆದ್ಮಿ - 26, ಬಿಎಸ್ಪಿ- 6 ಹಾಗೂ ಇತರೆ ಪಕ್ಷೇತರ-120 ಸೇರಿ ಒಟ್ಟು 300 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಮತದಾನಕ್ಕಾಗಿ 533 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಮಹಿಳೆ, ಪುರುಷ, ಇತರೆ ಸೇರಿ ಒಟ್ಟು 5 ಲಕ್ಷ 19 ಸಾವಿರಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ನಗರದ ಎನ್ವಿ ಕಾಲೇಜು ಮೈದಾನದಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ವೋಟಿಂಗ್ ಕರ್ತವ್ಯಕ್ಕೆ 2,570 ಪೋಲಿಂಗ್ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.