ಸೇಡಂ: ಪ್ರವಾಹಕ್ಕೆ ತುತ್ತಾದ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಈಗಾಗಲೇ 91,31,200 ರೂಪಾಯಿ ಪರಿಹಾರದ ಹಣ ನೀಡಲಾಗಿದೆ. ಉಳಿದ ಹಣ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾಹಿತಿ ನೀಡಿದ್ದಾರೆ.
ಪ್ರವಾಹ ಸಂತ್ರಸ್ತರ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಜಮೆ: ಸೇಡಂ ತಹಶೀಲ್ದಾರ್ - Sedam Tahsildar
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ನೆರೆ ಪೀಡಿತರ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಹೇಳಿದ್ದಾರೆ.
ಪ್ರವಾಹ ಸಂತ್ರಸ್ತರ ಖಾತೆಗೆ ಪರಿಹಾರ ಮೊತ್ತ ನೇರ ಜಮೆ
ಸೇಡಂ ತಾಲೂಕಿನಾದ್ಯಂದ ನದಿ ಪ್ರವಾಹ ಮತ್ತು ಮಳೆಯಿಂದ 233 ಮನೆಗಳು ಉರುಳಿ ಬಿದ್ದಿವೆ. ಅವುಗಳ ಪೈಕಿ 154 ಮನೆಗಳಿಗೆ ಮೊದಲ ಕಂತಿನ ತಲಾ 3,200 ರೂಪಾಯಿ ನೀಡಲಾಗಿದೆ. 2,953 ಮನೆಗಳಿಗೆ ನೀರು ನುಗ್ಗಿದ್ದು, ಅವುಗಳ ಪೈಕಿ 1,785 ಜನರಿಗೆ ಪರಿಹಾರ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ.
ಕೃಷಿ ಜಮೀನುಗಳು ಹಾನಿಯಾದ ಬಗ್ಗೆ ಕೃಷಿ ಇಲಾಖೆಯವರು ಮಾಹಿತಿ ನೀಡಿದ ನಂತರ ಪರಿಹಾರ ಲಭಿಸಲಿದೆ. ಬಾಕಿ ಉಳಿದ ಸಂತ್ರಸ್ತರಿಗೂ ಸಹ ಪರಿಹಾರ ಕಲ್ಪಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.