ಕಲಬುರಗಿ/ಬಳ್ಳಾರಿ:ನಗರಗಳಲ್ಲಿ ನಡೆಯುವ ಅಪರಾಧ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಎಲ್ಲೆಡೆ ಪೊಲೀಸರು ಇರೋಕಾಗಲ್ಲ...ಅವರಿಟ್ಟ ಕಣ್ಣುಗಳಿವೆ, ಹುಷಾರು! ಕಲಬುರಗಿಯಲ್ಲಿ 13 ಕಡೆ ಡಿಜಿಟಲ್ ತಂತ್ರಜ್ಞಾನವುಳ್ಳ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿಯಂತ್ರಣ ಘಟಕ ತೆರೆದು, ಅಲ್ಲಿಂದಲೇ ಎಲ್ಲ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಪ್ರಮುಖ ಬಡಾವಣೆಗಳಲ್ಲಿ 53 ಸಿಸಿ ಕ್ಯಾಮೆರಾ ಅಳವಡಿಸಿದ್ರೆ, ನಗರದ 1,000ಕ್ಕೂ ಅಧಿಕ ವ್ಯಾಪಾರಸ್ಥರು ಕ್ಯಾಮೆರಾ ಅಳವಡಿಸಿಕೊಳ್ಳಲು ಪೊಲೀಸ್ ಇಲಾಖೆ ಪ್ರೇರೇಪಿಸಿದೆ.
ಗಣಿನಗರಿಯಲ್ಲಿ ಈಗಾಗ್ಲೆ 250 ಡಿಜಿಟಲ್ ತಂತ್ರಜ್ಞಾನವುಳ್ಳ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 300 ಕಡೆ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಕ್ಯಾಮರಾಗಳ ಸ್ವರೂಪ ಹೇಗಿರಬೇಕು ಎಂದು ಸಾರ್ವಜನಿಕ ವಲಯ ಹಾಗೂ ವ್ಯಾಪಾರೋದ್ಯಮಿಗಳಿಗೆ ತಿಳಿಸಿಕೊಡಲಾಗಿದೆ.
ಇದನ್ನೂ ಓದಿ:ಗಗನಕ್ಕೇರುತ್ತಿರುವ ಇಂಧನ ಬೆಲೆ, ಸಂಕಷ್ಟದಲ್ಲಿ ಫುಡ್ ಡೆಲಿವರಿ ಬಾಯ್ಸ್!
ಅಪರಾಧ ಚಟುವಟಿಕೆಗಳು ಮತ್ತು ಅಪರಾಧಿಗಳನ್ನ ಮಟ್ಟ ಹಾಕಲು ಪೊಲೀಸರ ಈ ಕ್ರಮ ನೆರವಾಗಲಿದೆ.