ಕಲಬುರಗಿ:ಜಿಲ್ಲೆಯಲ್ಲಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಪೊಲೀಸ್ ಇಲಾಖೆ ಖಡಕ್ ಸಂದೇಶ ನೀಡುವುದರ ಜೊತೆಗೆ ಕಟ್ಟುನಿಟ್ಟಿನ ಕ್ರಮ ಸಹ ಕೈಗೊಂಡಿದ್ದಾರೆ. ಹೆಲ್ಮೆಟ್ ಧರಿಸದಿದ್ದವರಿಗೆ ದಂಡ ವಿಧಿಸುತ್ತಿದ್ದಾರೆ. ಹೆಲ್ಮೆಟ್ ಧರಿಸಿ ಕಾನೂನು ಗೌರವಿಸಿದವರಿಗೆ ಹೂವು ನೀಡಿ ಅಭಿನಂದಿಸಿದ್ದಾರೆ.
ಇಂದು ನಗರದ ಹಲವಡೆ ಟ್ರಾಫಿಕ್ ಪೊಲೀಸರು ದಂಡ ಇಲ್ಲವೆ ಹೂವು ಕಾರ್ಯಚರಣೆ ನಡೆಸಿದರು. ಇನ್ನು ಹೆಲ್ಮೆಟ್ ಕಡ್ಡಾಯ ನೀತಿ ಜಾರಿಗೆ ತರಲು ದೃಢ ನಿರ್ಧಾರ ಮಾಡಿದ ಪೊಲೀಸರು ಈ ಹಿಂದೆ ವಿಫಲವಾದಂತೆ ಈ ಬಾರಿ ಆಗದಿರಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಇದೆ 29 ರಿಂದ ಹೆಲ್ಮೆಟ್ ಧರಿಸದೇ ಬರುವ ಬೈಕ್ ಸವಾರರಿಗೆ ಪೆಟ್ರೋಲ್ ಮಾರಾಟ ಮಾಡದಂತೆ ಬಂಕ್ ವರ್ತಕರಿಗೆ ಖಡಕ್ ಸೂಚನೆ ನೀಡಿದ್ದಾರೆ.