ಕರ್ನಾಟಕ

karnataka

ETV Bharat / state

ದರ್ಶನ ನೀಡಿದ ಮಾತಾ ಮಾಣಿಕೇಶ್ವರಿ.. ಪುನೀತರಾದ ಭಕ್ತರು! - undefined

ಸೇಡಂ ತಾಲೂಕಿನ ಯಾನಾಗುಂದಿ ಗ್ರಾಮದ ಸುಕ್ಷೇತ್ರ ಮಾಣಿಕ್ಯ ಗಿರಿಯ ಮಾತಾ ಮಾಣಿಕೇಶ್ವರಿ ಅಮ್ಮನವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದಾಗಿ ಭಕ್ತರಿಗೆ ದರ್ಶನ ಭಾಗ್ಯ ರದ್ದು ಮಾಡಲಾಗಿತ್ತು. ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್​ ಎನ್ನುವವರು ಮಾತೆಯವರ ದರ್ಶನ ಭಾಗ್ಯ ಕಲ್ಪಿಸುವಂತೆ ಕೋರ್ಟ್​ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಾತೆಯವರ ದರ್ಶನವನ್ನು ಕಲ್ಪಿಸಲಾಗಿತ್ತು.

ಮಾತಾ ಮಾಣಿಕೇಶ್ವರಿ ಅಮ್ಮನವರು

By

Published : Jun 24, 2019, 6:17 PM IST

ಕಲಬುರಗಿ :ಸೇಡಂ ತಾಲೂಕಿನ ಯಾನಾಗುಂದಿ ಗ್ರಾಮದ ಸುಕ್ಷೇತ್ರದ ಮಾಣಿಕ್ಯ ಗಿರಿಯ ಮಾತಾ ಮಾಣಿಕೇಶ್ವರಿ ಅಮ್ಮನವರು ಅನಾರೋಗ್ಯದ ಹಿನ್ನೆಲೆಯಲ್ಲಿ ದರ್ಶನವನ್ನು ರದ್ದು ಮಾಡಿತ್ತು. ಆದರೆ, ಇಂದು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು.

ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ನೆಲೆಸಿರುವ ಗುಹೆಯ ಹೊರ ಭಾಗದ ಕೋಣೆಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಣೆಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ದರ್ಶನ ಹಿನ್ನೆಲೆಯಲ್ಲಿ ಹೊರ ಭಾಗದಿಂದ ಭಕ್ತರು ಸಾಲುಗಟ್ಟಿ ಬರವಂತೆ ಸೂಚಿಸಲಾಗಿದ್ದು, ಸಣ್ಣ ಗೇಟ್ ತೆರೆದು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು.

ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನ ಪಡೆಯುತ್ತಿರುವ ಭಕ್ತರು

ಅಮ್ಮನವರ ಆರೋಗ್ಯ ಕಾಪಾಡುವ ಮತ್ತು ಸಾರ್ವಜನಿಕ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್​ ಎನ್ನುವವರು ಕೋರ್ಟ್​ ಮೆಟ್ಟಿಲೇರಿದ್ದರು. ನಂತರ ಟ್ರಸ್ಟ್​ನವರು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಸಾರ್ವಜನಿಕ ಪ್ರಕಟಣೆ ಇಲ್ಲ :

ಅಮ್ಮನವರು ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿದ್ದು, ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ದರ್ಶನ ಮತ್ತು ಆರೋಗ್ಯಕ್ಕಾಗಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್​ ಸಹ ಅಮ್ಮನವರ ಆರೋಗ್ಯದಲ್ಲಿ ಸಮಸ್ಯೆ ಇರುವ ಬಗ್ಗೆ ವರದಿ ಪಡೆದಿತ್ತು. ಎಚ್ಚೆತ್ತುಕೊಂಡ ಟ್ರಸ್ಟ್​ನವರು ಅಮ್ಮನವರಿಗೆ ಸುಸಜ್ಜಿತ ಬೆಡ್, ಸುಸಜ್ಜಿತ ಕೋಣೆ ಮತ್ತು ಮಹಿಳಾ ಸೇವಕಿಯನ್ನು ನೇಮಿಸಿತ್ತು. ಈಗ ಪ್ರತಿ ಭಾನುವಾರ ಅಮ್ಮನವರ ದರ್ಶನ ಕಲ್ಪಿಸಲು ಮುಂದಾಗಿದೆ. ಸಾರ್ವಜನಿಕವಾಗಿ ಎಲ್ಲೂ ಸಹ ಅಮ್ಮನವರು ದರ್ಶನ ನೀಡುತ್ತಿರುವ ಬಗ್ಗೆ ಪ್ರಕಟಣೆ ನೀಡಿಲ್ಲ. ಕೇವಲ ಭಕ್ತರಿಂದ ಭಕ್ತರಿಗೆ ದೊರೆಯುವ ಮಾಹಿತಿ ಆಧಾರದ ಮೇಲೆ ಜನ ಬರುತ್ತಿದ್ದಾರೆ. ಟ್ರಸ್ಟ್​ ನಡೆ ಭಕ್ತರಲ್ಲಿ ಅನುಮಾನ ಮೂಡುವಂತೆ ಮಾಡಿದೆ.

ಮುಕ್ತ ದರ್ಶನಕ್ಕೆ ಒತ್ತಾಯ :
ಅಮ್ಮನವರ ಆರೋಗ್ಯದ ಕುರಿತು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಬೇಕು ಎಂದು ಕೋರ್ಟ್​ ಮೆಟ್ಟಿಲೀರಿದ ಮೇಲೆ ಟ್ರಸ್ಟ್​ ವ್ಯವಸ್ಥೆ ಮಾಡಿದ್ದು, ಇದು ನಾಚಿಕೆಗೇಡಿನ ಸಂಗತಿ. ಆಶ್ರಮಕ್ಕೆ ಧಕ್ಕೆ ತರುವ ಯಾವ ಉದ್ದೇಶ ನಮಗಿಲ್ಲ. ನಮಗೆ ಅಮ್ಮನವರ ಆರೋಗ್ಯ ಮುಖ್ಯ. ಟ್ರಸ್ಟ್​ನವರ ನಿಗೂಢ ನಡೆಯಿಂದ ಭಕ್ತರಲ್ಲಿ ಮಡುಗಟ್ಟಿರುವ ಆತಂಕ ದೂರ ಮಾಡಲು ಕೋರ್ಟ್​ ಮೆಟ್ಟಿಲೇರಲಾಗಿದೆ. ಕೂಡಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಭಕ್ತರಿಗೆ ಅಮ್ಮನವರ ದರ್ಶನದ ಮಾಹಿತಿ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ್​​ ಬಿ. ನಿಡಗುಂದಾ ಒತ್ತಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details